ವಿಜಯ ಸಂಘರ್ಷ
ಸಾಗರ: ಸಮಾಜದ ಏಳಿಗೆಗೆ ಶಿಕ್ಷಕರ ಪಾತ್ರ ಪ್ರಧಾನವಾದುದಾಗಿದ್ದು. ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನುಬಳಸಿಕೊಂಡು ಪಾಠ ಪ್ರವಚನದಲ್ಲಿ ತೊಡಗಿಕೊಂಡಾಗ ಬೋಧನೆ ಇನ್ನಷ್ಟು ಪರಿಣಾಮಕಾರಿ ಯಾಗುತ್ತದೆ. ಎಂದು ಪ್ರಾಚಾರ್ಯ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಅವರು ಆನಂದಪುರದ ಇಂದಿರಾಗಾoಧಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ಶಿಕ್ಷಕ ದಿನಾಚರಣೆಯಲ್ಲಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪ್ರಾಥಮಿಕ ಶಾಲೆಯಲ್ಲಿ ತನ್ನ ತಪ್ಪುಗಳನ್ನು ತೀಡಿದ, ಸನ್ಮಾರ್ಗವನ್ನು ತೋರಿದ ಗುರುವನ್ನು ಜೀವನದುದ್ದಕ್ಕೂ ಸ್ಮರಿಸುತ್ತಾನೆ. ಮಕ್ಕಳು ಪ್ರತಿ ಹಂತದಲ್ಲೂ ಶಿಕ್ಷಕರ ನಡೆ-ನುಡಿ ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಇದನ್ನರಿತು ಶಿಕ್ಷರು ಜವಾಬ್ದಾರಿಯುತ ವಾಗಿ ವರ್ತಿಸಬೇಕು.ಮಕ್ಕಳ ಆತ್ಮವಿಶ್ವಾಸ ವೃದ್ಧಿಸುವ ಚೈತನ್ಯ ಶಿಕ್ಷಕರಲ್ಲಿ ಸದಾ ಜಾಗೃತವಾಗಿರಬೇಕು. ಅಧ್ಯಯನ ಶೀಲತೆ, ಸಮಯ ಪಾಲನೆ, ಪ್ರಾಮಾಣಿಕತೆ, ಕೆಲಸದಲ್ಲಿ ಬದ್ಧತೆ ಹೊಂದಿದ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾತ್ರವಲ್ಲಸಮುದಾಯ ಕ್ಕೆ ಗುರುವಾಗಿ ಹೊರಹೊಮ್ಮುತ್ತಾರೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಾಲಾ ಶಿಕ್ಷಕರಿಗೆ ಮನೋರಂಜನೆ ಯುಕ್ತ ಆಟೋಟಗಳನ್ನು ಏರ್ಪಡಿಸಿದ್ದು ಶಿಕ್ಷಕರು ಉತ್ಸಾಹದಿಂದ ಭಾಗವಹಿಸಿದರು.