ಪೌಷ್ಠಿಕ ಆಹಾರ ಮಕ್ಕಳ ಬೆಳವಣಿಗೆಗೆ ಸಹಕಾರಿ

ವಿಜಯ ಸಂಘರ್ಷ
ಆನಂದಪುರ(ಸಾಗರ): ಹಿಂದೆ ಆಯಾ ಕಾಲಕ್ಕೆ ಅನುಗುಣವಾಗಿ ಪ್ರಕೃತಿಯಲ್ಲಿ ದೊರೆಯುವ ಎಲ್ಲಾ ತರಹದ ಹಣ್ಣು, ಸೊಪ್ಪು,ತರಕಾರಿ ಮುಂತಾದವುಗಳನ್ನು ಮನೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿತ್ತು ಅದರೆ ಈಗ ಮನೆಯಲ್ಲಿ ಮಾಡಿದ ಅಡುಗೆಗಿಂತ ರಸ್ತೆ ಬದಿ ಸಿಗುವ ತಿಂಡಿಗಳೆಡೆಗೆ ಆಕರ್ಷಿತರಾಗುತ್ತಿರುವುದು ಮತ್ತು ಸೇವಿಸುತ್ತಿರುವುದು ಖೇದಕರವಾದುದು ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಘವೇಂದ್ರ ಹೇಳಿದರು.

ಅವರು ಇಲ್ಲಿಗೆ ಸಮೀಪದ ಬಳ್ಳಿಬೈಲು ಸರಕಾರಿ ಶಾಲೆಯಲ್ಲಿ ಆಯೋಜಿಸಲಾದ ಪೋµಣಾ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಹೊರಗಿನ ಜಂಕ್ ಫುಡ್‌ಗಳಿಗೆ ಬದಲಾಗಿ ಮನೆಯಲ್ಲಿ ಸದಾ ತಾಜಾ ಸೊಪ್ಪು,ತರಕಾರಿ, ಮೊಟ್ಟೆ, ಹಾಲು. ಹಣ್ಣು, ಮೊಳಕೆ ಬರಿಸಿದ ಕಾಳು ಇತ್ಯಾದಿ ಗಳನ್ನು ಬಳಸುವಂತೆ ನೋಡಿಕೊಳ್ಳಬೇಕು ಫಾಸ್ಟ್ ಫುಡ್ ನಿಂದ ಸ್ವತ: ತಂದೆ ತಾಯಂದಿರು ದೂರವಿರುವುದರ ಜೊತೆಗೆ ತಮ್ಮ ಮಕ್ಕಳನ್ನು ಸಾಧ್ಯವಾದಷ್ಟು ದೂರವಿರಿಸಿದಾಗ ಆರೋಗ್ಯದಲ್ಲಿ ಸಮನ್ವಯತೆ ಕಾಯ್ದುಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯಶಿಕ್ಷಕ ಸತೀಶ್‌ಕುಮಾರ್ ಎಸ್ ಡಿ, ಶಿಕ್ಷಕಿ ಸುಜಾತಾ ಹೆಗಡೆ, ರಂಜಿತಾ, ಚಂದ್ರಕಾAತ, ಶಾರದಾ, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು