ವಿಮರ್ಶಕರು ಸಂಸ್ಕೃತಿಯ ಸಂರಕ್ಷಕರು: ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್

ವಿಜಯ ಸಂಘರ್ಷ
ಭದ್ರಾವತಿ: ವ್ಯಕ್ತಿಯ ಸಹಜಗುಣ ವಿಮರ್ಶಿಸುವ ಸಂದರ್ಭದ ಗುಣದೋಷ ಗಳನ್ನು ವಿವೇಚಿಸುವ ಮನೋಧರ್ಮವೇ ಜೀವನ ವ್ಯಾಖ್ಯಾನವಾದ ಸಾಹಿತ್ಯದ ವಿಮರ್ಶೆಯಾಗಿರುತ್ತದೆ. ವಿಮರ್ಶಕರು ಸಂಸ್ಕೃತಿಯ ಸಂರಕ್ಷಕರೆಂದು ಕುವಿವಿ ಪ್ರಾಧ್ಯಾಪಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ್ ಅಭಿಪ್ರಾಯಪಟ್ಟರು.

ಅವರು ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಮಿಳುನಾಡು ಘಟಕದ ಸಹಯೋಗದಲ್ಲಿ ಏರ್ಪಡಿಸಿದ ಕನ್ನಡ ಸಾಹಿತ್ಯದ ಬಹುಮುಖತೆ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬಿಡುಗಡೆ ಮಾಡಿದ ಬಹುಮುಖ ಕೃತಿಯ ಕುರಿತು ಮಾತಾಡಿದರು.

ನಲವತ್ತೊಂದು ವಿಮರ್ಶಾ ಲೇಖನಗಳಿರುವ ಈ ಕೃತಿಯಲ್ಲಿ ಸೀಮಾತೀತ ನೆಲೆಯಲ್ಲಿ ರೂಪಿತವಾಗಿರುವ ಲೇಖನಗಳಿವೆ. ಬರೀ ಟೀಕೆ ಟಿಪ್ಪಣಿಗಳಿಗೆ ವಿಮರ್ಶೆಯು ಸಾಧನವಲ್ಲ. ವಿಮರ್ಶೆಯು ಸಾಹಿತ್ಯದ ಸತ್ವತತ್ವಗಳನ್ನು ಅನಾವರಣಗೊಳಿಸಬೇಕು. ಈ ಹಿನ್ನೆಲೆಯಲ್ಲಿ ಬಹುಮುಖದ ಲೇಖನ ಗಳಿವೆ ಎಂದು ತಿಳಿಸಿದರು.

ಕೃತಿ ಬಿಡುಗಡೆ ಮಾಡಿ ಮಾತಾಡಿದ ದ್ರಾವಿಡಿಯನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶಾರದ ಅವರು ಸಾಹಿತ್ಯ ಮತ್ತು ವಿಮರ್ಶೆ ಬದುಕನ್ನು ಗಟ್ಟಿಗೊಳಿಸುವ ಸಾಧನಗಳು ಸಾಹಿತ್ಯದ ಓದಿಗೆ ಪ್ರೇರೇಪಿಸುವ ಕೆಲಸವನ್ನು ವಿಮರ್ಶೆ ಮಾಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತಾಡಿದ ಡಾ.ತಮಿಳ್ ಸೆಲ್ವಿ ಕನ್ನಡ ಸಾಹಿತ್ಯಕ್ಕೆ ಅಪೂರ್ವವಾದ ಪರಂಪರೆಯಿದೆ. ಅಂತಹ ಸಾಹಿತ್ಯದ ಚಿಂತನಮಂಥನ ನಡೆಯಬೇಕು. ದ್ರಾವಿಡ ಭಾಷೆಗಳಾದ ಕನ್ನಡ, ತಮಿಳು ನಡುವೆ ಅವಿಭಾಜ್ಯ ಬಾಂಧವ್ಯವಿದೆ. ಅನುವಾದದ ಮೂಲಕ ಎರಡು ರಾಜ್ಯಗಳ ಸಂಸ್ಕೃತಿ ಯನ್ನು ಅರ್ಥೈಸಿಕೊಳ್ಳಬೇಕೆಂದರು.

ಪ್ರಾಸ್ತಾವಿಕ ಮಾತನಾಡಿದ ರಾಷ್ಟ್ರೀಯ ವಿಚಾರ ಸಂಕಿರಣದ ಸಂಚಾಲಕ ಡಾ.ಎಂ.ರಂಗಸ್ವಾಮಿ ಕನ್ನಡ ಮತ್ತು ತಮಿಳುನಾಡು ನಡುವೆ ಉತ್ತಮ ಬಾಂಧವ್ಯ ವನ್ನು ಬೆಸೆಯಬೇಕು. ಕೇರಳ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡಿನ ವಿದ್ವಾಂಸರೆಲ್ಲ ಸೇರಿ ಕನ್ನಡ ಸಾಹಿತ್ಯದ ಬಹುಮುಖತೆಯನ್ನು ಕುರಿತು ಚರ್ಚಿಸುವ ಈ ಕಾರ್ಯಕ್ರಮವು ಸಾಮರಸ್ಯ ಮತ್ತು ಸೌಹಾರ್ದ ತೆಯನ್ನು ವೃದ್ಧಿಗೊಳಿಸು ವುದೆಂದರು.

ಮೊದಲ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ರಾಣಿಚನ್ನಮ್ಮ ವಿ.ವಿ.ಯ ಡಾ.ಪಿ. ನಾಗರಾಜ್ ಮಾತಾನಾಡಿ ಮದ್ರಾಸ್‌ ಪ್ರಾಂತ್ಯದಲ್ಲಿ ಬೆಳೆದ ಕನ್ನಡ ಭಾಷೆ, ಸಂಸ್ಕೃತಿಯ ಮಹತ್ವವನ್ನು ತಿಳಿಸಿದರು.

 ಎರಡನೇ ಗೋಷ್ಟಿಯ ಅಧ್ಯಕ್ಷತೆ ವಹಿಸಿದ್ದ ಡಾ.ಹಾ.ಮ.ನಾಗಾರ್ಜುನ ಮಾತಾನಾಡಿ ಕನ್ನಡ ವಿಮರ್ಶೆಯು ಕನ್ನಡ ಸಂಸ್ಕೃತಿ ಯನ್ನು ತಿಳಿಯಲು ನೆರವಾಗುತ್ತದೆಂದರು. ಸಮಾರೋಪ ನುಡಿಗಳನ್ನು ಡಾ.ಚಂದ್ರಕಲಾ ಮಾತಾಡಿದರು.

ಡಾ ಸೃಜೇಶ್ ಸ್ವಾಗತಿಸಿದರು.
ಬೊಮ್ಮೇಗೌಡರು ಕಾರ್ಯಕ್ರಮ ನಿರೂಪಿಸಿದರು. ಡಾ. ಜಿ.ಎಸ್.ಅಶೋಕ, ರವಿ, ರವಿಚಂದ್ರ, ಹನುಮಾಕ್ಷಿ ಗೋಗಿ, ಪ್ರೇಮ, ಗಿರೀಶ್, ಡಾ.ಶಾರದಮ್ಮ, ಡಾ.ಮಲ್ಲಿಕಾರ್ಜುನ, ಡಾ.ಮುನಿರಾಜ್ ಮೊದಲಾದ ಇಪ್ಪತ್ತೈದಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು