ಮಾಜಿ ಸೈನಿಕನ ಮಗಳ ಮಾದರಿ ಜನ್ಮ ದಿನಾಚರಣೆ

ವಿಜಯ ಸಂಘರ್ಷ
ಭದ್ರಾವತಿ: ಮಾಜಿ ಸೈನಿಕನೊರ್ವರು ತಮ್ಮ ಮಗಳ ಜನ್ಮ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿ ಇತರರಿಗೆ ಮಾದರಿ ಯಾಗಿದ್ದಾರೆ.

ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ವಿಐಎಸ್ ಎಲ್ ಕಾರ್ಖಾನೆ ಯಲ್ಲಿ ಕರ್ತವ್ಯ ನಿರ್ವಸುತ್ತಿರುವ ವೀರಮಣಿ ರವರು ಭಾನುವಾರ ನಗರದ ಸಿದ್ದಾಪುರದಲ್ಲಿ ಸುರಕ್ಷಾ ವೃದ್ದಾಶ್ರಮ ಮತ್ತು ಅನಾಥಾಶ್ರಮ ದಲ್ಲಿ ಹಿರಿಯರ ಆಶೀರ್ವಾದ ಪಡೆಯಲೆಂದೆ ತಮ್ಮ ಮಗಳ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡರು.

ಪತ್ನಿ ರೇವತಿ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉನ್ನತ ಉದ್ಯೋಗ ದಲ್ಲಿದ್ದರು ತಮ್ಮ ಮಗಳು ಸುಭೀಕ್ಷಾ ರವರ 12 ನೆಯ ವರ್ಷದ ಹುಟ್ಟು ಹಬ್ಬಾಚರಣೆ ಯನ್ನು ಆಶ್ರಮದಲ್ಲಿ ಆಚರಿಸಿಕೊಂಡಿದ್ದಾರೆ.
ಆಶ್ರಮದ ಅಧ್ಯಕ್ಷರಾದ ಜ್ಯೋತಿ ಸೋಮಶೇಖರ್ ಇವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಸುಭೀಕ್ಷಾರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಆಶ್ರಮದ ಪದಾಧಿಕಾರಿಗಳು, ವಯೋವೃದ್ಧ ಅಶ್ರಿತರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು