ವಿಜಯ ಸಂಘರ್ಷ
ಶಿಕಾರಿಪುರ: ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮದಿನ ಪ್ರಯುಕ್ತ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸಂಸ್ಥಾಪಕ ಅಧ್ಯಕ್ಷ ಗುಣರಂಜನ್ ಶೆಟ್ಟಿ ರವರ ಆದೇಶದಂತೆ ರಾಜ್ಯಾಧ್ಯಕ್ಷ ಶ್ರೀನಿವಾಸ್ ರವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಪೊಲೀಸ್ ಠಾಣೆಗಳ ಆವರಣದಲ್ಲಿ ಬೆಲೆ ಬಾಳುವ ಸಸಿಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿಗೆ ಚಾಲನೆ ನೀಡಲಾಯಿತು.
ವೇದಿಕೆವತಿಯಿಂದ ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಟೌನ್ ಪಿಎಸ್ಐ ಪ್ರಶಾಂತ್ ಕುಮಾರ್ ರವರಿಂದ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಅವರು ಮನುಷ್ಯನ ಅತಿ ಆಸೆಗೆ ಇಂದು ಕಾಡುಗಳು ನಶಿಸುತ್ತಿವೆ. ಉತ್ತಮ ಆರೋಗ್ಯ ಹಾಗೂ ಒಳ್ಳೆಯ ವಾತಾವರಣಕ್ಕೆ ಸಸ್ಯ ರಾಶಿ ಅತ್ಯಮೂಲ್ಯ ವಾಗಿದ್ದು ಗಿಡ ಬೆಳೆಸುವ ಮೂಲಕ ಹಸಿರು ಹಾಗೂ ನಾಡಿನ ಉಳಿವು ಮತ್ತು ಉತ್ತಮ ಆರೋಗ್ಯ ವಾತಾವರಣ ನಿರ್ಮಾಣ
ವಾಗಲಿದೆ ಎಂದು ಸಂಘಟನೆಯ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಶಿವಯ್ಯ ಎನ್ ಶಾಸ್ತ್ರಿ ಮಾತನಾಡಿ ಅಭಿವೃದ್ಧಿಯ ಹೆಸರಿನಲ್ಲಿ ಗಿಡಮರಗಳು ನಶಿಸುತ್ತಿದ್ದು, ಕಾಡಿನಲ್ಲಿರುವ ಬೆಲೆಬಾಳುವ ಗಿಡಮರಗಳು ಕೂಡ ಕಣ್ಮರೆಯಾಗಿ ಕಾಡಿನಲ್ಲಿರುವ ಜೀವಿಗಳು ನಾಡಿಗೆ ಬರುತ್ತಿವೆ. ಸಂಘಟನೆಯ ವತಿಯಿಂದ ಸಸಿಗಳನ್ನು ನೆಡುವ ಮೂಲಕ ಹಸಿರು ಕ್ರಾಂತಿ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ಮುಕ್ರಂ, ಮುಖಂಡರಾದ ಆನಂದ್, ನಾಗರಾಜ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಹಾಗೂ ಸಂಘಟನಾ ಸದಸ್ಯರು ಉಪಸ್ಥಿತರಿದ್ದರು.
Tags:
ಶಿಕಾರಿಪುರ ಜಯಕರ್ನಾಟಕ