ವಿಜಯ ಸಂಘರ್ಷ
ಶಿವಮೊಗ್ಗ: ವಿಶ್ವದ ಉನ್ನತ ವಿಜ್ಞಾನಿಗಳ ಕುರಿತು ಅಮೆರಿಕಾದ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ ಸಿದ್ದಪಡಿಸಿದ ಪಟ್ಟಿಯಲ್ಲಿ ಶಿವಮೊಗ್ಗದ ಡಾ.ಆರ್.ಎಸ್. ವರುಣ್ ಕುಮಾರ್ ಸ್ಥಾನ ಪಡೆದಿದ್ದಾರೆ.
ದಾವಣಗೆರೆ ವಿವಿಯ ಪ್ರೊ. ಬಿ.ಸಿ ಪ್ರಸನ್ನ ಕುಮಾರ ಅವರ ಮಾರ್ಗದರ್ಶನದಲ್ಲಿ ಗಣಿತಶಾಸ್ತ್ರದ ಸಂಶೋಧನಾರ್ಥಿಯಾದ ಡಾ.ಆರ್.ಎಸ್.ವರುಣ್ಕುಮಾರ್ ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯವು ತಯಾರಿಸಿದ 2022 ರವರೆಗಿನ ಜಾಗತಿಕ ಮಟ್ಟದ ಅತ್ಯುನ್ನತ ಶೇ. 2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದ ಸಂಶೋಧನೆ, ಸಂಶೋಧನಾ ವರದಿ, ಸಂಶೋಧನಾ ಉಲ್ಲೇಖಗಳು, ಲೇಖನಗಳನ್ನು ಒಳಗೊಂಡ ಹೆಚ್-ಇಂಡೆಕ್ಸ್, ಐ-ಟೆನ್ ಇಂಡೆಕ್ಸ್ ಸೇರಿದಂತೆ ವಿವಿಧ ಮಾನದಂಡ ಗಳನ್ನು ಪರಿಗಣಿಸಿ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಶಿವಮೊಗ್ಗದ ಪತ್ರಕರ್ತ, ಲೇಖಕ ಎನ್.ರವಿಕುಮಾರ್(ಟೆಲೆಕ್ಸ್ ರವಿ) ಮತ್ತು ಶಶಿಕಲಾ ದಂಪತಿಯ ಪುತ್ರ ಡಾ.ಆರ್.ಎಸ್. ವರುಣ್ಕುಮಾರ್ ಗಣಿತಶಾಸ್ತ್ರದ "ಶಾಖ ಮತ್ತು ಸಮೂಹ ವರ್ಗಾವಣೆ, ದ್ರವಚನ ಶಾಸ್ತ್ರ" ವಿಷಯಗಳಲ್ಲಿ ಸಂಶೋಧನೆಯಲ್ಲಿ ತೊಡಗಿದ್ದು.ಪ್ರಸ್ತುತ ಬೆಂಗಳೂರಿನ ಅಮೃತಾನಂದಮಯಿ ವಿಶ್ವವಿದ್ಯಾಪೀಠಂ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸಂಶೋಧನೆ ಯಲ್ಲಿ ತೊಡಗಿದ್ದಾರೆ.
ವಿಶ್ವ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಡಾ.ಆರ್.ಎಸ್.ವರುಣ್ಕುಮಾರ್ ರವರನ್ನು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ಬಿ.ಡಿ. ಕುಂಬಾರ ಮತ್ತು ಆಡಳಿತ ವರ್ಗ ಹಾಗೂ ಅಮೃತಾನಂದಮಯಿ ವಿಶ್ವ ವಿದ್ಯಾಪೀಠಂ ನ ಕುಲಪತಿಗಳಾದ ಶ್ರೀಮಾತಾ ಅಮೃತಾನಂದಮಯಿದೇವಿ ಅವರು ಅಭಿನಂದಿಸಿದ್ದಾರೆ.
Tags:
ಟೆಲೆಕ್ಸ್ ರವಿಕುಮಾರ್