ಅಲೆಮಾರಿ ಸಮಾಜದವರನ್ನು ಒಕ್ಕಲೆಬ್ಬಿಸದಂತೆ ಕೆಆರ್ ಎಸ್ ಪಕ್ಷದಿಂದ ಮನವಿ

ವಿಜಯ ಸಂಘರ್ಷ
ಶಿಕಾರಿಪುರ: ತಾಲೂಕಿನ ನೆಲವಾಗಿಲು ಗ್ರಾಮದಲ್ಲಿರುವ 30 ಕುಟುಂಬಗಳಿಗೆ ಶಾಶ್ವತ ನೆಲೆ ಒದಗಿಸಿ ಕೊಡುವಂತೆ ಹಾಗೂ ಪೂರ್ವಜರಿಂದ ಪೂಜಿಸುತ್ತಿದ್ದ ದೇವರು ಗಳನ್ನು ಮುಂದಡೆ ಇಟ್ಟು ಪೂಜೆ ಸಲ್ಲಿಸಲು ಜಾಗ ಕಲ್ಪಿಸುವಂತೆ ಒತ್ತಾಯಿಸಿ ಸರ್ಕಾರಕ್ಕೆ ಅಲೆಮಾರಿ ಸಮಾಜದವರು ಹಾಗೂ ಕೆ ಆರ್ ಎಸ್ ಪಕ್ಷದ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಅಲೆಮಾರಿ ಸಮಾಜದ ಮುಖಂಡರು ತಾಲೂಕಿನ ನೆಲವಾಗಿಲು ಗ್ರಾಮದ ಸರ್ವೆ ನಂಬರ್ 25ರಲ್ಲಿ ಗೋಮಾಳು ಜಮೀನು ಇತ್ತು ಈ ಗೋಮಾಳು ಜಮೀನಿನಲ್ಲಿ ಸುಮಾರು 40 ವರ್ಷಗಳಿಂದ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿದ್ದು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದಿದ್ದರೂ ಕೂಡ ಮಕ್ಕಳನ್ನು ಶಾಲೆಗೆ ಸೇರಿಸುತ್ತಾ ಕೂಲಿ ಕೆಲಸ ಮಾಡುತ್ತಿದ್ದೇವೆ. ಅಲೆಮಾರಿ ಸಮಾಜದ ಪೂರ್ವಜರಂತೆ ಬಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದ ಕಾಲವೊಂದಿತ್ತು, ದೇವರು ಗಳನ್ನು ಹೊತ್ತುಕೊಂಡು ಹಳ್ಳಿ ಹಳ್ಳಿಗಳಲ್ಲಿ ಮನೆಮನೆಗಳಿಗೆ ಭಿಕ್ಷಾಟನೆ ಮಾಡುವ ಪರಂಪರೆಯನ್ನು ಬಿಟ್ಟು ಈಗ ಮಕ್ಕಳಿಗೆ ವಿದ್ಯಾಭ್ಯಾಸ ಸೇರಿದಂತೆ ಹೊಸ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ವಾಸಿಸಲು ಸೂಕ್ತ ನೆಲೆ ಬೇಕಾಗಿದೆ, ಹಾಗೂ ನಾವು ಪೂಜಿಸುವ ದೇವರುಗಳಿಗೆ ಪೂಜೆ ಸಲ್ಲಿಸಲು ಒಂದು ಕಡೆ ಸೂಕ್ತ ಜಾಗ ಸರ್ಕಾರ ನೀಡಬೇಕಿದೆ.

ಈಗಾಗಲೇ ಈ ಹಿಂದೆ ನಾವು 94 ಸಿ ನಲ್ಲಿ ಅರ್ಜಿ ಕೂಡ ಸಲ್ಲಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ ಇತ್ತೀಚಿಗೆ ತಹಶೀಲ್ದಾರ್ ರವರು ಕೂಡ ನಮಗೆ ಜಾಗ ತೆರವು ಮಾಡುವಂತೆ ನೋಟಿಸ್ ನೀಡಿದ್ದಾರೆ. ರಕ್ಷಿಸಬೇಕಾದ ಸರ್ಕಾರ ಅಲೆಮಾರಿ ಜನಾಂಗದ ಹಿತಕಾಯಬೇಕಿದೆ ಹಾಗೂ ಸೂಕ್ತ ರಕ್ಷಣೆಯೊಂದಿಗೆ ನೆಲೆ ಭದ್ರ ಮಾಡಬೇಕೆಂದು ಮನವಿ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಷ್ಟ್ರಸಮಿತಿ ಪಕ್ಷದ ಮುಖಂಡರಾದ ರಾಮ ನಾಯ್ಕ್,, ರವಿ ಕುಮಾರ್, ದೇವರಾಜ್ , ಸ್ವಾಮಿ, ದುರ್ಗಪ್ಪ ಹಾಗೂ ಇತರೆ ಅಲೆಮಾರಿ ಸಮಾಜದವರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು