ಶಾಸಕ ಗೋಪಾಲ ಕೃಷ್ಣ ಬೇಳೂರು ರವರು ಯಡಿಯೂರಪ್ಪನವರಲ್ಲಿ ಕ್ಷಮೆಕೋರಲಿ

ವಿಜಯ ಸಂಘರ್ಷ
ಸಾಗರ (ಆನಂದಪುರ): ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಬಗ್ಗೆ ಹಗುರವಾಗಿ ಮಾತನಾಡಿರುವ ಸಾಗರ- ಹೊಸನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಗೋಪಾಲ ಕೃಷ್ಣ ಬೇಳೂರು ರವರು ಯಡಿಯೂರಪ್ಪನವರಲ್ಲಿ ಕ್ಷಮೆಕೋರಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹೊನಗೋಡು ರತ್ನಾಕರ ಆಗ್ರಹಿಸಿದರು.

ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಗೋಪಾಲಕೃಷ್ಣ ಕ್ಷೇತ್ರದ ಅಭಿವೃದ್ಧಿ ಯೆಡೆಗೆ ಚಿಂತಿಸಿ ಕಾರ್ಯಪ್ರವೃತ್ತ ರಾಗುವುದನ್ನು ಬಿಟ್ಟು ಯಾರನ್ನೋ ಓಲೈಸುವ ಮನಸ್ಥಿತಿಯಿಂದ ಹೊರಬರಬೇಕಿದೆ. ಬಿಜೆಪಿಯಲ್ಲಿದ್ದಾಗ ಕಾಗೋಡು ತಿಮ್ಮಪ್ಪನವರನ್ನು ಬಯ್ಯುತ್ತಿದ್ದ ನೀವು ಈಗ ಕಾಂಗ್ರೆಸ್ ನಲ್ಲಿರುವುದರಿಂದ ಬಿ ಎಸ್ ವೈ ರವರನ್ನು ಅನಗತ್ಯವಾಗಿ ತೆಗಳುತ್ತಿದ್ದೀರಿ. ಆಡಿದ ಮಾತನ್ನು ವಾಪಾಸ್ ಪಡೆದು ಬಹಿರಂಗ ಕ್ಷಮೆ ಯಾಚಿಸುವಂತೆ ಅಗ್ರಹಿಸಿದರು.

ಬಂಗಾರಪ್ಪ, ಬಿ ಎಸ್ ವೈ, ಕಾಗೋಡು ತಿಮ್ಮಪ್ಪ ಇವರುಗಳು ಕೇವಲ ತಮ್ಮ ತಮ್ಮ ಜಾತಿಗೆ ಮಾತ್ರ ನಾಯಕರಲ್ಲ ಎಲ್ಲಾ ವರ್ಗದವರನ್ನೂ ಏಕರೂಪವಾಗಿ ಕಂಡು ಬೆಳೆಸಿದವರಾಗಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು. ಹಿಂದೆ ಕಾಗೋಡರನ್ನು ಬಯ್ಯುತ್ತಿದ್ದ ನೀವು ಇಂದು ಯಡಿಯೂರಪ್ಪ ನವರನ್ನು ಬಯ್ಯುತ್ತಿದ್ದೀರಿ ಇಂತಹ ಹೇಳಿಕೆ ನಿಮಗೆ ಹೊಸದಲ್ಲ ಎಂದು ವ್ಯಂಗ್ಯ ವಾಡಿದರು.

ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಕುಮಾರ್ ಮಾತನಾಡಿ ಬಿ ಎಸ್ ವೈ ರವರು ನೀಡಿದ ಕೊಡುಗೆಗಳನ್ನು ಮರೆಯಬಾರದು ಅವರು ಕೇವಲ ವೀರಶೈವ ಜನಾಂಗದ ನಾಯಕರು ಮಾತ್ರವಲ್ಲ ಎಲ್ಲಾ ಸಮುದಾಯದವರ ಏಳಿಗೆಗೆ ಶ್ರಮಿಸುತ್ತಿರುವ ಮಹಾನಾಯಕ. ಅವರ ಮೇಲೇ ನೀಡಿರುವ ಹೇಳಿಕೆ ಹಿಂಪಡೆದ್ದುಕೊಳ್ಳಿ ಎಂದು ಆಗ್ರಹಿಸಿದರು.

ಗೋಷ್ಟಿಯಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಆಚಾಪುರ ಶಾಂತಕುಮಾರ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಕೆರೆಹಿತ್ಲು ಗಿರೀಶ್, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ರೇವಪ್ಪ ಹೊಸಕೊಪ್ಪ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು