ವಿಜಯ ಸಂಘರ್ಷ
ಭದ್ರಾವತಿ : ವಿದ್ಯುತ್ ಕಂಬಗಳು ಸಾರ್ವಜನಿಕ ಆಸ್ತಿಯಾಗಿ ಪರಿಗಣಿಸಿದ್ದ ರಿಂದ ರಸ್ತೆ ಅಪಘಾತದಲ್ಲಿ ವಿದ್ಯುತ್ ಕಂಬ ಹಾಳಾದರೂ ದಂಡ ತೆತ್ತಬೇಕಿದೆ.
ಅ.21 ರಂದು ಭದ್ರಾವತಿಯಿಂದ ಶಿವನಿ ಕಡೆಗೆ ಹೊರಟಿದ್ದ ಕೆ.ಎ-52 ಬಿ-4032 ಲಾರಿ ಚಾಲಕ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಗಂಗೂರಿನ ಅಣಪ್ಪ ರವರ ಮನೆಯ ಹತ್ತಿರ ರಸ್ತೆಯ ಎಡ ಬದಿಯಲಿರುವ ಮೆಸ್ಕಾಂ ಇಲಾಖೆಯ ಕೆ.ಇ.ಬಿ ವಿದ್ಯುತ್ 33 ಕೆ.ವಿ ವಾಹಕದ ಕಂಬಗಳಿಗೆ ಡಿಕ್ಕಿಹೊಡೆಸಿದ್ದಾನೆ.
ಪರಿಣಾಮ ಲಾರಿ ಸಮೇತ ಕಂಬ ಕೆಳಗೆ ಬಿದ್ದಿದ್ದು ಏಕಕಾಲದಲ್ಲಿ 7 ಕಂಬಗಳು ಮುರಿದು ಬಿದ್ದಿತ್ತು.ವಿದ್ಯುತ್ ವಾಹಕ ಗಳು ತುಂಡಾಗಿ ಬಿದ್ದಿತ್ತು. ಇದರೊರಿಂದ ನಮ್ಮ ಇಲಾಖೆಗೆ ಸುಮಾರು 1.50 ಲಕ್ಷ ರೂ ನಷ್ಟ ಉಂಟಾಗಿದೆ. ಲಾರಿ ಚಾಲಕ ಮಂಜುನಾಥ ಮೆಸ್ಕಾಂ ಇಲಾಖೆ ಯೊಂದಿಗೆ ರಾಜಿ ಮಾಡಿಕೊಂಡು ಕೆ.ಇ.ಬಿ ಕಂಬಗಳನ್ನು ಹಾಕಿಸಿ ಕೊಡುವುದಾಗಿ ಒಪ್ಪಿಕೊಂಡಿದ್ದರು, ಆದರೆ ಇದುವರೆವಿಗೂ ಕಂಬಗಳನ್ನು ಹಾಕಿಸಿಕೊಟ್ಟಿರುವುದಿಲ್ಲ ಎಂದು ಭದ್ರಾವತಿ ಮೆಸ್ಕಾಂನ ಜ್ಯೂನಿಯರ್ ಇಂಜಿನಿಯರ್, ಲಾರಿ ಚಾಲಕ ಮಂಜುನಾಥ ರವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.