ವಿಜಯ ಸಂಘರ್ಷ
ಭದ್ರಾವತಿ: ಸಂಪಾದನೆಯಿಂದ ಉಳಿತಾಯ ಮಾಡಿ ಮುಂದಿನ ಜೀವನಕ್ಕೆ ಉಳಿಸಬೇಕೆಂಬ ಹಂಬಲಿಸುವ ಅದೆಷ್ಟೋ ಜನ ಜಾಗೃತಿಯಿಂದ ಹಣ ಜೋಪಾನ ಮಾಡುವ ಇತ್ತೀಚಿನ ದಿನಗಳಲ್ಲಿ ಇಲ್ಲಿನ ಎಸ್ ಎಂಎಫ್ ಜಿ ಇಂಡಿಯಾ ಕ್ರೆಡಿಟ್ ಕಂಪನಿ ಖಾಸಗಿ ವ್ಯವಹಾರ ಸಂಸ್ಥೆಯ ಸಿಬ್ಬಂದಿಗಳು ತಿಂಗಳ ಸಂಬಳದ ಉಳಿತಾಯ ಹಣ ಕ್ರೂಡೀಕರಿಸಿ ವೃದ್ಧರ ಅಭಿವೃದ್ಧಿಗೆ ವೃದ್ದಾಶ್ರಮಗಳಿಗೆ ತೆರಳಿ ಸಹಾಯಸ್ತ ನೀಡಿರುವುದು ನಿಜಕ್ಕೂ ಇತರರಿಗೆ ಮಾದರಿಯಾಗಿದೆ.
ಅದರಲ್ಲೂ ಯುವಕರು ವೃದ್ಧರನ್ನು ಕಂಡು ಇಂದು ದೂರ ಸರಿಯುವ ಕಾಲದಲ್ಲಿ ಸಹಾಯಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ, ಹೌದು
ಎಸ್ ಎಂಎಫ್ ಜಿ ಇಂಡಿಯಾ ಕ್ರೆಡಿಟ್ ಕಂಪನಿಯ ಸಿಬ್ಬಂದಿಗಳು ಇಂದು ನಗರದ ಸಿದ್ದಾಪುರದಲ್ಲಿನ ಸುರಕ್ಷಾ ಜೀವನ ಸೇವಾ ಟ್ರಸ್ಟ್, ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮಕ್ಕೆ ತೆರಳಿ ಕೇವಲ ಆರ್ಥಿಕ ಸಹಾಯ ಮಾತ್ರವಲ್ಲದೆ ಆಶ್ರಮದಲ್ಲಿನ ವೃದ್ಧ ಮಹಿಳೆಯರು ಹಾಗೂ ಅನಾಥರಿಗಾಗಿ ದಿನಸಿ ಪದಾರ್ಥ ನೀಡಿ ಮಾನವೀಯತೆ ಮೆರೆದಿದ್ದಾರೆ.
ಯುವಕರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದ ಆಶ್ರಮದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್, ಆಶ್ರಮಕ್ಕೆ ಕಳೆದೆರಡು ವರ್ಷಗಳಿಂದ ಆಶ್ರಮಕ್ಕೆ ಅಕ್ಕಿ, ದಿನಸಿ ಪದಾರ್ಥಗಳನ್ನು ನೀಡಿ ಸಹಾಯ ಮಾಡುತ್ತಾ ಬಂದಿರುವ ಯುವಕರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ ಎಂಎಫ್ ಜಿ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರಾದ ಶಾಬಾಸ್ ಖಾನ್,ವಸಂತ, ಸುಂದರೇಶ್, ಅಫ್ಜಲ್ ಬೇಗ್, ಅಕ್ಷತಾ, ಕಾವ್ಯ, ಭಾಗ್ಯಲಕ್ಷ್ಮಿ ಮತ್ತಿತರರಿಗೆ ಆಶ್ರಮದ ಖಜಾಂಚಿ ಸೋಮಶೇಖರ್ ಅಭಿನಂದಿಸಿದರು.
Tags:
ಮಾನವೀಯತೆ ಮೆರೆದ ಯುವಕರು