ಸುಖಾಂತ್ಯ ಕಂಡ ಐವರ ಮಿಸ್ಸಿಂಗ್ ಪ್ರಕರಣ

ವಿಜಯ ಸಂಘರ್ಷ
ಭದ್ರಾವತಿ: ಹಳೇನಗರ ವ್ಯಾಪ್ತಿಯಲ್ಲಿ ಐವರು ಮಕ್ಕಳು ಸೇರಿದಂತೆ ಒರ್ವ ಮಹಿಳೆ ಮಿಸ್ಸಿಂಗ್ ಆಗಿರುವ ಪ್ರಕರಣ ಸುಖಾಂತ್ಯಗೊಂಡಿದೆ.

ಕಳೆದ ನ: 11 ರಂದು ಕಾಣೆಯಾದ ಪ್ರಕರಣ ನ:15 ರಂದು ಸಂಜೆ ಎರಡು ದೂರು ದಾಖಲಾಗಿತ್ತು. ಸ್ಟೇಷನ್​ನಲ್ಲಿ ದಾಖಲಾದ ಎಫ್​ಐಆರ್ ಪ್ರಕಾರ ತೀವ್ರ ಕಾರ್ಯಚರಣೆ ನಡೆಸಿದ ಪೊಲೀಸರು ಹುಡುಕಾಟ ತೀವ್ರ ಗೊಳಿಸಿದ್ದರು.

ಮಹಿಳೆ ಸೇರಿ ಐದು ಜನ‌ ಮಕ್ಕಳು ಪತ್ತೆಯಾಗಿದ್ದಾರೆ. ಮೈಸೂರಿನಲ್ಲಿ 6 ಮಂದಿ ಸಿಕ್ಕಿದ್ದು ಇವರನ್ನ ಭದ್ರಾವತಿ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ವೈಯುಕ್ತಿಕ ಕಾರಣದ ಹಿನ್ನಲೆಯಲ್ಲಿ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು