ಮನಸು ಮನಸುಗಳನ್ನು ಕಟ್ಟಲು ಸಾಹಿತ್ಯದಿಂದ ಮಾತ್ರ ಸಾಧ್ಯ: ಡಿ.ಮಂಜುನಾಥ್

ವಿಜಯ ಸಂಘರ್ಷ
ಸಾಗರ: ಸಾಹಿತ್ಯದ ಮೂಲಕ ಮನಸು ಮನಸುಗಳನ್ನು ಕಟ್ಟಲು ಸಾಧ್ಯ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಹೇಳಿದರು.

ಶೃಂಗೇರಿ ಶಂಕರ ಮಠದ ಸಭಾಂಗಣ ದಲ್ಲಿ ಕಸಾಪ ಆಯೋಜಿಸಿದ್ದ ಸಾಹಿತ್ಯ ಸಮ್ಮೇಳನದ ಕುರಿತ ಅನನ್ಯ ಸಮ್ಮೇಳನ ಕೃತಿಯನ್ನು ಬಿಡುಗಡೆ ಗೊಳಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ತಲೆಮಾರಿಗೆ ಸಾಹಿತ್ಯವನ್ನು ತಲುಪಿಸಬೇಕಾಗಿದೆ ಆಧುನಿಕತೆಯ ಜಗತ್ತಿನಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಮಕ್ಕಳಲ್ಲಿ ಸಾಹಿತ್ಯ ಸಾಂಸ್ಕೃತಿಕ ಮನೋಭಿರುಚಿಯನ್ನು ಬೆಳೆಸಬೇಕಾಗಿದೆ. ನಮ್ಮನ್ನು ನಾವು ಇಂತಹ ಕಾರ್ಯಕ್ರಮ ಗಳನ್ನು ಮುನ್ನಡೆಸುವ ಕಾರ್ಯ ನಿರಂತರವಾಗಿ ನಡೆಯಲಿ ಸಾಹಿತ್ಯದ ಮನಸುಗಳು ಮುಂದಾಗಬೇಕು ಎಂದರು.

ವಿ.ಗಣೇಶ್ ಅವರ ಮೂವತ್ತು ಪ್ರಖ್ಯಾತ ವಿಜ್ಞಾನಿಗಳು ಕೃತಿಯನ್ನು ಸಾಹಿತಿ ಡಾ.ಕೆ.ಎನ್.ಗುರುದತ್ ಅವರು ಬಿಡುಗಡೆಗೊಳಿಸಿ ಮಾತನಾಡಿ ಬರೆದಂತೆ ಬದುಕಿದವರು ಬದುಕಿದಂತೆ ಬರೆದವರು ವಿ.ಗಣೇಶ್ ಅವರು. ಪರಿಷತ್ತಿಗೆ ತನ್ನದೆಯಾದ ಗಟ್ಟಿತನ ಇದೆ.ಅನೇಕರನ್ನು ಬೆಳೆಸಿದೆ. ಶಿಕ್ಷಣದಲ್ಲಿ ಮೌಲಿಕತೆ ಇರಬೇಕು, ವಿಜ್ಞಾನ ವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಆಗಬೇಕಾಗಿದೆ, ವಿಜ್ಞಾನ ಸತ್ಯದ ಅನಾವರಣ ಆಗಿದೆ ಸಾಧಕರ ವ್ಯಕ್ತಿತ್ವವನ್ನು ತಿಳಿದುಕೊಳ್ಳುವ ಹಾಗೂ ತಿಳಿಸುವ ಪ್ರಯತ್ನ ಅಭಿನಂದನೀಯ ಎಂದವರು ಹೇಳಿದರು.

ವೇದಿಕೆಯಲ್ಲಿ ಸಾಹಿತಿ ವಿ.ಗಣೇಶ್, ಶೃಂಗೇರಿ ಶಂಕರ ಮಠದ ಧರ್ಮದರ್ಶಿ ಅಶ್ವಿನಿ ಕುಮಾರ್, ಆನಂದಪುರದ ಬಿ.ಡಿ.ರವಿಕುಮಾರ್ ಉಪಸ್ಥಿತರಿದ್ದರು
ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಆರಂಭದಲ್ಲಿ ನಂದಿನಿ ಪ್ರಾರ್ಥಿಸಿದರು ಲೋಕೇಶ್ ಕುಮಾರ್ ಸ್ವಾಗತಿಸಿ ಉಮೇಶ್ ಹಿರೇನೆಲ್ಲೂರು ವಂದಿಸಿ ಡಾ.ಪ್ರಸನ್ನ ನಿರೂಪಿಸಿದರು. ಆಹ್ವಾನಿತ ಗಾಯಕರಿಂದ ಗಾಯನ ಕಾರ್ಯಕ್ರಮ ನೆರವೇರಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು