ವಿಜಯ ಸಂಘರ್ಷ
ಭದ್ರಾವತಿ: ನಗರದ ತರೀಕೆರೆ ರಸ್ತೆ ಗಾಂಧಿ ವೃತ್ತದ ಪುಟ್ ಪಾತ್ ವ್ಯಾಪಾರಿಗಳಿಗೆ ಗಾಂಧಿ ವೃತ್ತದ ಬಳಿ ಇರುವ ಕನ್ಸರ್ ವೆನ್ಸಿಯಲ್ಲಿ ಸುಸಜ್ಜಿತ ಹೈಟೆಕ್ ಪುಡ್ ಕೋರ್ಟ್ ನಿರ್ಮಾಣ ಮಾಡುವ ಬಗ್ಗೆ ವ್ಯಾಪಾರಸ್ಥರಿಂದ ಪೂರ್ವಬಾವಿ ಸಭೆ ಕರೆಯಲಾಗಿತ್ತು.
ನಗರಸಭಾ ಕಛೇರಿ ಸಭಾಂಗಣದಲ್ಲಿ
ನಡೆದ ಸಭೆಯಲ್ಲಿ ಪೌರಾಯುಕ್ತ ಮನುಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ ಅಧ್ಯಕ್ಷೆ ಶೃತಿ ಸಿ.ವಸಂತಕುಮಾರ್, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸದಸ್ಯರಾದ ಚನ್ನಪ್ಪ, ಟಿಪ್ಪು, ಮೋಹನ್ ಕುಮಾರ್, ಜಾರ್ಜ್, ವಿ.ಕದಿರೇಶ್, ಕಾಂತರಾಜ್, ಸಮುದಾಯ ಸಂಘಟನಾಧಿಕಾರಿ ಸುವಾಸಿನಿ ಸೇರಿದಂತೆ ಸ್ಥಳೀಯ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.