ವಿಜಯ ಸಂಘರ್ಷ
ಭದ್ರಾವತಿ: ಉಪವಿಭಾಗದ ಪೊಲೀಸರು ವಿವಿಧೆಡೆ ಕಳವು ಮಾಡಲಾಗಿದ್ದ 14 ಹಾಗು ಕಳವು ಕೃತ್ಯಕ್ಕೆ ಬಳಸಿಕೊಳ್ಳಲಾಗಿದ್ದ 2 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 5.80 ಲಕ್ಷ ರು. ಮೌಲ್ಯದ ಒಟ್ಟು 16 ದ್ವಿಚಕ್ರ ವಾಹನ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದಾರೆಂದು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮಾರೆಡ್ಡಿ ತಿಳಿಸಿದರು.
ಅವರು ನಗರದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮಾಹಿತಿ ನೀಡಿ, ತಾಲೂಕಿನ ಸಿದ್ದಾಪುರ ಹೊಸೂರು ಉರ್ದು ಶಾಲೆಯ ಹಿಂಭಾಗ ನಿವಾಸಿಗಳಾದ ಅಬುಲ್ ಕರೀಂ ಅಲಿಯಾಸ್ ಮನ್ನಾ(27) ಮತ್ತು ಅರ್ಷೀಲ್ ಪಾಷಾ ಅಲಿಯಾಸ್ ಹರ್ಷೀಲ್(34) ಹಾಗು ಶಿವಮೊಗ್ಗ ರಾಗಿಗುಡ್ಡ ಮೊರಾರ್ಜಿ ಶಾಲೆಯ ಬಳಿ ನಿವಾಸಿ ಪ್ರಭು ಅಲಿಯಾಸ್ ಕೋಳಿ(27) ಒಟ್ಟು 3 ಮಂದಿಯನ್ನು ಬಂಧಿಸಿ ನ್ಯೂಟೌನ್ ಪೊಲೀಸ್ ಠಾಣೆಗೆ ಸೇರಿದ 7, ತರೀಕೆರೆ ಪೊಲೀಸ್ ಠಾಣೆಗೆ 1, ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಗೆ ಸೇರಿದ 1, ಪೇಪರ್‌ಟೌನ್ ಪೊಲೀಸ್ ಠಾಣೆಗೆ ಸೇರಿದ 1, ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ಸೇರಿದ 2, ಹೊಳೆ ಹೊನ್ನೂರು ಪೊಲೀಸ್ ಠಾಣೆಗೆ ಸೇರಿದ 1 ಮತ್ತು ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಗೆ ಸೇರಿದ 1 ಹಾಗು ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಪತ್ತೆ ಕಾರ್ಯಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನೀಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜ್ ಮೇಲ್ವಿಚಾರಣೆಯಲ್ಲಿ ವೃತ್ತ ನಿರೀಕ್ಷಕರಾದ ಶ್ರೀ ಶ್ರೀಶೈಲ್ ಕುಮಾರ್ ಮತ್ತು ಜಗದೀಶ ಸೋಮನಾಳ, ಪೇಪರ್‌ಟೌನ್ ಪೊಲೀಸ್ ಠಾಣೆ ನಿರೀಕ್ಷಕಿ ನಾಗಮ್ಮ ಮತ್ತು ಹೊಳೆಹೊನ್ನೂರು ಪೊಲೀಸ್ ಠಾಣೆ ನಿರೀಕ್ಷಕ ಲಕ್ಷ್ಮೀಪತಿ ನೇತ್ರತ್ವದಲ್ಲಿ ಠಾಣಾಧಿಕಾರಿಗಳಾದ ಸುರೇಶ್ ಮತ್ತು ರಮೇಶ್, ಉಪ ಠಾಣಾಧಿಕಾರಿ ಚಂದ್ರಶೇಖರ್ ಹಾಗು ಪೊಲೀಸ್ ಸಿಬ್ಬಂದಿಗಳಾದ ನವೀನ್, ಚನ್ನಕೇಶವ, ನಾಗರಾಜ ಹಾಗು ಆದರ್ಶ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಡಿ. 16ರಂದು 3 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್ ರವರು ತಂಡವನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ ಎಂದರು.
Tags:
ಭದ್ರಾವತಿ ಅಪರಾಧ ಸುದ್ದಿ