ದಿನಗೂಲಿ ಪೌರಕಾರ್ಮಿಕನಿಗೆ ಲೋನ್ ಕೊಡಿಸುವ ನೆಪದಲ್ಲಿ ಲಕ್ಷಾಂತರ ರೂ ವಂಚನೆ

ವಿಜಯ ಸಂಘರ್ಷ
ಶಿಕಾರಿಪುರ: ಪಟ್ಟಣದ ಕೊಡಚಾದ್ರಿ ಚಿಟ್ ಫಂಡ್ ನ ವ್ಯವಸ್ಥಾಪಕ ಮತ್ತು ಸಿಬ್ಬಂದಿಗಳು ಇಲ್ಲಿನ ಪುರಸಭೆಯಲ್ಲಿ ದಿನಗೂಲಿ ಪೌರಕಾರ್ಮಿಕನಿಗೆ ಲೋನ್ ಕೊಡಿಸುವ ನೆಪದಲ್ಲಿ 15,90,000 ಹಣ ವಂಚಿಸಿ ನಕಲಿ ದಾಖಲೆಗಳೊಂದಿಗೆ ಎರಡನೇ ಬಾರಿ ದೀಡ್ ರಿಜಿಸ್ಟರ್ ಮಾಡಿಸಿಕೊಂಡು ದಲಿತರ ಮೇಲೆ ದೌರ್ಜನ್ಯ ವೆಸಗುತ್ತಿದ್ದಾರೆ ಎಂದು ಜಯ ಕರ್ನಾಟಕ ಜನಪರ ವೇದಿಕೆ ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆ ಸಂಘಟನೆಯ ಮುಖಂಡರು ಕಿಡಿಕಾರಿದರು.

ನಗರದ ಸುದ್ದಿ ಮನೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭ್ರಷ್ಟಾಚಾರ ತನಿಖೆಗೆ ಆಗ್ರಹ ಪಡಿಸಿದರು.

ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ ಮಾತನಾಡಿ ಪಟ್ಟಣದಲ್ಲಿ ಇತ್ತೀಚೆಗೆ ನಕಲಿ ಆಧಾರ್ ಕಾರ್ಡ್, ನಕಲಿ ಹಕ್ಕು ಪತ್ರ ಸೇರಿದಂತೆ ಆಸ್ತಿಯ ಮೇಲೆ ಋಣ ಭಾರಗಳಿದ್ದರೂ ಮರೆ ಮಾಚಿಸಿ ತಯಾರಿಸುವ ಜಾಲಗಳು ಪಟ್ಟಣದಲ್ಲಿ ಸಕ್ರಿಯವಾಗಿವೆ. ಯಾರದೋ ಮನೆಯ ಮುಂದೆ, ಯಾರದೋ ಜಮೀನಿನ ಮುಂದೆ, ಯಾರದೋ ಅಂಗಡಿಗಳ ಮುಂದೆ ನಿಲ್ಲಿಸಿ ಫೋಟೋ ತೆಗೆಸಿ ಅವರದೇ ಮನೆ ಆಸ್ತಿಯೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಲೋನ್ ಗಳನ್ನು ಕೊಡಿಸುವ ಜಾಲ ಪೊಲೀಸರು ಭೇದಿಸಬೇಕಿದೆ. ಯಾವುದೇ ರಾಜಕೀಯ ಒತ್ತಡಕ್ಕೆ ಪೊಲೀಸ್ ಇಲಾಖೆ ಮಣಿಯದೆ ನಕಲಿ ದಾಖಲೆ ತಯಾರಕರ ಎಡೆಮುರಿ ಕಟ್ಟಬೇಕೆಂದು ಸಂಘಟನೆ ಆಗ್ರಹಿಸುತ್ತದೆ ಎಂದರು.

ಕೊಡಚಾದ್ರಿ ಚಿಟ್ ನ ಮ್ಯಾನೇಜರ್ ಆನಂದ್ ಸಿಬ್ಬಂದಿಗಳು ಮತ್ತು ತಂಡ ಪುರಸಭೆ ದಿನಗೂಲಿ ದಲಿತ ಪೌರಕಾರ್ಮಿಕ ಶ್ರೀನಿವಾಸ್ ಅಸಹಾಯಕತೆ ಅನಕ್ಷರತೆ ಅರಿತ ತಂಡ ಎಚ್ ಡಿ ಎಫ್ ಸಿ ಬ್ಯಾಂಕ್ ನಲ್ಲಿ ಖಾತೆ ತೆರೆಸಿ ಇವರ ಹೊಸ ಸಿಮ್ ನಂಬರ್ ನೀಡಿ ಶ್ರೀನಿವಾಸನ ಹೆಸರಿನಲ್ಲಿ ಕೊಡಚಾದ್ರಿ ಮ್ಯಾನೇಜರ್ ಆನಂದ್ ರವರ ತಂಡ ಪ್ರತಿ ತಿಂಗಳು 62,000 ಹಣ ಕಟ್ಟಿ 25 ಲಕ್ಷದ ಚೀಟಿಯನ್ನು 10 ಲಕ್ಷ ಬಿಡ್ ಮಾಡಿ 15 ಲಕ್ಷದ 90 ಸಾವಿರ ಹಣವನ್ನು ಹೊಸ ಖಾತೆಗೆ ವರ್ಗಾಯಿಸಿ ಶ್ರೀನಿವಾಸನ ಗಮನಕ್ಕೆ ಬಾರದಂತೆ ಹೊಸ ಸಿಮ್ ನಂಬರ್ ನಿಂದ ತಮ್ಮ ತಮ್ಮವರಿಗೆ ಹಣ ವರ್ಗಾಯಿಸಿಕೊಂಡು ವಂಚಿಸಿ ರುತ್ತಾರೆಂದು ಆರೋಪಿಸಿದರು.

25 ಲಕ್ಷ ಚೀಟಿಯ ಹಣಕ್ಕೆ ಶೂರಿಟಿಗಾಗಿ ಶ್ರೀನಿವಾಸನ ತಾಯಿಯವರಿಂದ ಈಗಾಗಲೇ ಆಧಾರ್ ಹೌಸಿಂಗ್ ಲೋನ್ ನಲ್ಲಿ ದೀಡ್ ರಿಜಿಸ್ಟರ್ ಆಗಿದ್ದ ಸ್ವತ್ತನ್ನೇ ಇಸಿಯಲ್ಲಿ ಋಣ ರಹಿತ ಎಂದು ಮರೆಮಾಚಿ ಪುನಹ ಕೊಡಚಾದ್ರಿ ಅವರೇ ದೀಡ್ ರಿಜಿಸ್ಟರ್ ಮಾಡಿಕೊಳ್ಳುತ್ತಾರೆ. 2016 ಸಾಲಿನಲ್ಲಿ ನೀಡಿದ ಒರಿಜಿನಲ್ ಹಕ್ಕುಪತ್ರವನ್ನು 2003ರಲ್ಲಿ ನೀಡಿದೆ ಎಂದು ನಕಲಿ ಹಕ್ಕು ಪತ್ರವನ್ನು ಒರಿಜಿನಲ್ ಹಕ್ಕು ಪತ್ರದ ರೀತಿ ತಯಾರಿಸಿ ದೀಡ್ ರಿಜಿಸ್ಟರ್ ಮಾಡಿಕೊಂಡಿದ್ದಾರೆ ಮತ್ತು ಎಂಟು ಒಂಬತ್ತು ಸಾವಿರ ಸಂಬಳ ಪಡೆಯುವ ಶ್ರೀನಿವಾಸನಿಗೆ 1 ಲಕ್ಷ ಆದಾಯ ತೋರಿಸಿರುತ್ತಾರೆ.

ಶ್ರೀನಿವಾಸನ ಗಮನಕ್ಕೆ ಬಾರದೆ ಹಣ ವರ್ಗಾವಣೆ ಆದ ಹಣವಂಚನೆಯಾದ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ 420 ಕೇಸ್ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ. ಕೊಡಚಾದ್ರಿ ಚಿಟ್ ಭ್ರಷ್ಟಾಚಾರ ಪ್ರಕರಣ ದಲ್ಲಿ ನ್ಯಾಯ ಕೊಡಿಸಬೇಕಾದ ವಕೀಲ ರೊಬ್ಬರ ಹೆಸರು ಇರುವುದು ವಿಶೇಷ.
ಈಗಾಗಲೇ ಶಿಕಾರಿಪುರ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ಸಾರ್ವಜನಿಕರಲ್ಲಿ ಸಮಾಧಾನ ತಂದಿದೆ ಎಂದರು.

ಭ್ರಷ್ಟಾಚಾರ ವಿರೋಧಿ ವೇದಿಕೆಯ ಉಪಾಧ್ಯಕ್ಷ ರವೀಂದ್ರ ಕಿಟ್ಟಿ ಮಾತನಾಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅನಕ್ಷರಸ್ತರಿಗೆ, ರೈತರಿಗೆ ಮುಂದಿನ ದಿನಗಳಲ್ಲಿ ಇಂತಹ ತಂಡಗಳಿಂದ ಅನ್ಯಾಯವಾಗದಂತೆ ಸರ್ಕಾರ ಕ್ರಮ ಜರುಗಿಸಬೇಕು ಹಾಗೂ ಭ್ರಷ್ಟಾಚಾರ ದಿಂದ ಕೂಡಿರುವ ಕೊಡಚಾದ್ರಿ ಚಿಟ್ ನಲ್ಲಿ ಇನ್ನೂ ಇಂತಹ ಎಷ್ಟು ನಕಲಿ ದಾಖಲೆಗಳ ಭ್ರಷ್ಟಾಚಾರ ಇದೆ ಎಂಬುದರ ಬಗ್ಗೆ ಸಂಪೂರ್ಣ ಸಂಬಂಧಪಟ್ಟ ಇಲಾಖೆಯಿಂದ ತನಿಖೆ ನಡೆಸಬೇಕು ಹಾಗೂ ಇಂತಹ ಕೊಡಚಾದ್ರಿ ಚಿಟ್ ಸಂಸ್ಥೆಗಳಿಗೆ ಬೀಗ ಜಡೆಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ಶಿವಯ್ಯ ಎನ್ ಶಾಸ್ತ್ರಿ, ಮುಕ್ರಂ, ಇಮ್ರಾನ್, ಮಹೇಶ್, ಮತ್ತಿಕೋಟೆ ಮಾಲತೇಶ್, ಎಚ್ಎಫ್ ಯಾವಗಲ್, ಕಾಂಗ್ರೆಸ್ ಮುಖಂಡ ಹುಲ್ಮಾರ್ ಸಣ್ಣಪ್ಪ ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆಯ ವಿಜಯ್ ಕುಮಾರ್, ಮಾಲತೇಶ್, ಅಹ್ಮದ್ ಆಲಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು