ವಿಜಯ ಸಂಘರ್ಷ
ಸಾಗರ: ಆನಂದಪುರ ಸಮೀಪದ ಇರುವಕ್ಕಿ ಯಲ್ಲಿರುವ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿ ಗಳು ಸ್ಥಳೀಯ ರೈತರ ಜಮೀನಿನ ಮೇಲೆ ಕಣ್ಣು ಹಾಕಿ ಅವರುಗಳಿಗೆ ನಿರಂತರವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ತಾ.ಪಂ. ಮಾಜಿ ಸದಸ್ಯ ಲ್ಯಾವಿಗೆರೆ ಸೋಮಶೇಖರ್ ಆರೋಪಿಸಿದರು.
ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ ವಿಶ್ವವಿದ್ಯಾಲಯದ ಅಧಿಕಾರಿಗಳು ರೈತರ ಮೇಲೆ ದಬ್ಬಾಳಿಕೆ ಮಾಡುತ್ತಿರು ವುದನ್ನು ನಿಲ್ಲಿಸಬೇಕು. ಇದಕ್ಕೆ ಸಂಬoಧಿಸಿದoತೆ ವಿವಿಯ ಅಧಿಕಾರಿ ಗಳು, ಜಿಲ್ಲಾಧಿಕಾರಿ ಗಳೊಂದಿಗೆ ಶೀಘ್ರದಲ್ಲಿಯೇ ಶಾಸಕರು ಚರ್ಚಿಸಿ ಯಾವುದೇ ರೀತಿಯಲ್ಲಿ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂಬ ವಿಶ್ವಾಸದ ನುಡಿಗಳನ್ನಾಡಿದರು.
ಅರುಣ್ ಗೌಡ್ರು ಕರಡಿಮನೆ ಮಾತನಾಡಿ ಇಲ್ಲಿ 100 ರೈತಾಪಿ ಕುಟುಂಬಗಳಿದ್ದು ಈ ಹಿಂದೆ ಪ್ರಸ್ತಾವಿತ ನಕ್ಷೆಯನ್ನು ಬಿಟ್ಟು ಅಕ್ಕಪಕ್ಕದವರ ರೈತರ ಉಳುಮೆ ಜಮೀನನ್ನು, ತೋಟಗಳನ್ನು ತನ್ನ ತೆಕ್ಕೆಗೆ ತೆಗೆದು ಕೊಳ್ಳಲು ಹೊರಟಿ ತೊಂದರೆ ನೀಡುತ್ತಿದ್ದಾರೆ. ಮೂಲ ನಕ್ಷೆಯ ಪ್ರಕಾರ ಸರಿಯಾಗಿ ಸರ್ವೆ ಮಾಡಿಸಿ ವಿ ವಿ ಗಡಿಯನ್ನು ಗುರುತಿಸಬೇಕಾದ ಅಗತ್ಯವಿದೆ.
ವಿಶ್ವವಿದ್ಯಾಲಯ ಸ್ಥಾಪನೆಯಾಗುವ ಮುನ್ನ ಈ ಭಾಗದಲ್ಲಿ ರೈತರ ಜಮೀನು ಗಳನ್ನು ವಶಕ್ಕೆ ಪಡೆದುಕೊಳ್ಳುವುದಿಲ್ಲ ಹಾಗೂ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲಾಗುತ್ತದೆ ಎಂಬೆಲ್ಲಾ ಮಾತು ಗಳು ಹುಸಿಯಾಗಿವೆ. ಉನ್ನತ ಹುದ್ದೆಗಳು ಹೊರಗಿನ ಜಿಲ್ಲೆಯವರಿಗೆ ನೀಡಿ ಕೆಳ ದರ್ಜೆಯ ನೌಕರಿಯನ್ನು ಮಾತ್ರ ಸ್ಥಳೀಯರಿಗೆ ನೀಡಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು. ಇದೇ ರೀತಿ ಅಧಿಕಾರಿಗಳ ವರ್ತನೆ ಮುಂದುವರೆದರೆ ನಾವೆಲ್ಲಾ ರೈತರು ಪ್ರತಿಭಟಿಸಿ ಸಾಮೂಹಿಕ ವಾಗಿ ವಿಷಪ್ರಾಶನ ಮಾಡಿಕೊಳ್ಳಬೇಕಾಗು ತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎನ್ ಸಿದ್ದೇಶ್ವರ ಕಾಲೋನಿ, ಯಡೇಹಳ್ಳಿ ರವಿ, ಉಮೇಶ್‌ಕರಡಿಮನೆ, ರೈತರಾದ ಶಂಕರಪ್ಪ, ಮಂಜಪ್ಪ, ನಾಗಪ್ಪ, ಕೃಷ್ಣಪ್ಪ, ಸಂತೋಷ್, ಚೌಡಪ್ಪ, ಲಿಂಗರಾಜು, ಪರಮೇಶ್,ಸುನಿಲ್‌ಗೌಡ ಮತ್ತಿತರಿದ್ದರು.
(ವರದಿ ಎಸ್ ಡಿ ಚಂದ್ರಶೇಖರ್ ಆನಂದಪುರ)
Tags:
ಆನಂದಪುರ ಕೃಷಿ ವಿವಿ ಸುದ್ದಿ