ವಿಜಯ ಸಂಘರ್ಷ
ವಿಜಯಪುರ: ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಇಂದಿಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು,ಹಸುಳೆ ವೃದ್ಧರು ಎನ್ನದೆ ಅತ್ಯಾಚಾರ. ಹೆಣ್ಣು ಮಕ್ಕಳ ಬೆತ್ತಲೆ ಮೆರವಣಿಗೆ. ಮರ್ಯಾದ ಹತ್ಯೆ ನಿರಂತರ ನಡೆಯುತ್ತಿದೆ.ಈ ಎಲ್ಲಾ ಸಮಸ್ಯೆಗಳ ವಿರುದ್ಧ ರಾಜ್ಯದ್ಯಂತ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಎಐಎಂಎಸ್ಎಸ್ ರಾಜ್ಯ ಕಾರ್ಯದರ್ಶಿ ಎಮ್.ವಿ.ಕಲ್ಯಾಣಿ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನೊಂದ ಮಹಿಳೆಯರ ಧ್ವನಿಯಾಗಿ ದೇಶಾದ್ಯಂತ ಹೋರಾಟಗಳನ್ನು ಸಂಘಟಿಸುತ್ತಾ ಬಂದಿದೆ ಎಂದರು.
ಮಹಿಳೆಯರ ಮೇಲಿನ ಗುಂಪು ಅತ್ಯಾಚಾರ ಗಳು, ಆಸಿಡ್ ದಾಳಿ, ಕೌಟುಂಬಿಕ ದೌರ್ಜನ್ಯ ಶಿಶು ಹತ್ತೆ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಂತಹ ಅವಮಾನವೀಯ ದಾಳಿಗಳು ನಡೆಯಲು ಕಾರಣ ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದಲ್ಲಿನ ಹೋರಾಟ ಅನಿವಾರ್ಯ ಎಂದಿದ್ದಾರೆ.
ಮಹಿಳೆಯರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಿ ದುಡಿಯುವ ಮಹಿಳೆಯರಿಗೆ ಕನಿಷ್ಠ ವೇತನ. ಸೇವಾ ಭದ್ರತೆ ಖಾತ್ರಿಪಡಿಸಲು ಹೋರಾಟದ ಮುಂದುವರಿದ ಭಾಗವಾಗಿ ಎಂಬ ಈ ಘೋಷ ವಾಕ್ಯಗಳೊಂದಿಗೆ.
ಜ.6/7 ರಂದು ನಡೆಯುವ ಏಳನೆಯ ರಾಜ್ಯಮಟ್ಟದ ಮಹಿಳಾ ಸಮ್ಮೇಳನಕ್ಕೆ ಸಜ್ಜಾಗುತ್ತಿದೆ.
ರಾಷ್ಟ್ರ ಮಟ್ಟದಲ್ಲಿ ನಿರ್ಭಯ ಅತ್ಯಾಚಾರ ಪ್ರಕರಣ ಬಿಲ್ಕಿಸ್ ಬಾನು ಆಸಿಪಾ ಪ್ರಕರಣ. ಹತ್ರಾಸ್. ಹುಣ್ಣಾವು ಪ್ರಕರಣಗಳ ವಿರುದ್ಧ ಹಾಗೂ ಕುಸ್ತಿಪಟುಗಳ ಹೋರಾಟ ವನ್ನು. ಬೆಂಬಲಿಸಿ ಅಖಿಲ ಭಾರತ ಮಟ್ಟದಲ್ಲಿನ ಕರೆಯ ಮೇರೆಗೆ ಎಐಎಂಎಸ್ಎಸ್ ದಾವಣಗೆರೆಯಲ್ಲಿ ನಡೆಯುವ ಈ ರಾಜ್ಯ ಸಮ್ಮೇಳನದ ಬಹಿರಂಗ ಸಭೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಲಿದ್ದಾರೆ. ರಾಜ್ಯದ ಎಲ್ಲಾ ಪ್ರಜ್ಞಾವಂತ ಜನತೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.