ಭದ್ರಾವತಿ: ನಮ್ಮ ಭಾಷೆ, ನಾಡು, ದೇಶದ ಕುರಿತು ಅಭಿಮಾನವಿರಬೇಕು. ನಮ್ಮತನ ವನ್ನು ಬಿಟ್ಟುಕೊಡಬಾರದು ಎಂದು ಮಕ್ಕಳಿಗೆ ಕಥೆಗಳ ಮೂಲಕ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ನಾಗರಾಜ್ ತಿಳಿಸಿದರು.
ಶಂಕರಘಟ್ಟದ ಶ್ರೀಶಾ ಕಲಾ ವೇದಿಕೆ ವತಿಯಿಂದ ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಶಂಕರಘಟ್ಟ (ತಾವರಘಟ್ಟ) ಇಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಕನ್ನಡದಲ್ಲಿ ಅತಿ ಹೆಚ್ಚು ಅಂಕಪಡೆದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ದಲ್ಲಿ ಮಾತನಾಡಿದರು.
ಮಕ್ಕಳಿಗೆ ತಿಳಿಹಾಸ್ಯದೊಂದಿಗೆ ಕನ್ನಡ, ಕರ್ನಾಟಕ, ಕನ್ನಡತನದ ಬಗ್ಗೆ ಸವಿಸ್ತಾರವಾಗಿ ಮಕ್ಕಳಿಗೆ ತಿಳಿಸಿದರು. ತಾವು ಮಾತನಾಡುತ್ತಿರುವ ವಿಷಯ ಗಳಲ್ಲಿ ಮಕ್ಕಳಿಂದ ಉತ್ತರ ಪಡೆಯುತ್ತಾ ಅರ್ಥೈಸಿದರು.
ಶಿಕ್ಷಕರು ತಿದ್ದಿ ತೀಡಿ, ಮುಂದಿನ ವಿದ್ಯಾಭ್ಯಾಸಕ್ಕೆ ಉತ್ತಮ ತಳಪಾಯ ಹಾಕುತ್ತಾರೆ. ಈ ಭದ್ರ ಬುನಾದಿಯು ವ್ಯಕ್ತಿ ಬೆಳೆದು ದೊಡ್ಡವನಾದಾಗ ಅವನ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಈ ಹಂತದಲ್ಲಿ ಉತ್ತಮ ಸಂಸ್ಕಾರವನ್ನು ಕಲಿಯಬೇಕು, ಶಿಕ್ಷಣದಲ್ಲಿ ಗಮನವಿರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶ್ರೀಶಾ ಕಲಾ ವೇದಿಕೆಯ ಸಂಸ್ಥಾಪಕರಾದ ಆಶಾ ಶ್ರೀಧರ್ ಪ್ರಾಸ್ತಾವಿಕ ನುಡಿಗಳನ್ನಾಡಿ ಗುರುಗಳು, ಶಿಕ್ಷಕರು ಅಂದಾಗ ತಟ್ಟನೆ ನೆನಪಾಗೋದು ಪ್ರಾಥಮಿಕ ಶಾಲೆಯ ಶಿಕ್ಷಕರು. ಅವರಿಗೆ ನಮ್ಮ ಮೇಲಿದ್ದಷ್ಟು ಅಧಿಕಾರ, ಪ್ರೀತಿ ಇನ್ಯಾರಿಗೂ ಇರುವುದಿಲ್ಲ. ವ್ಯಕ್ತಿತ್ವ ವಿಕಸನಕ್ಕೆ ಇದು ತಳಹದಿ. ಮನೆಯೇ ಮೊದಲ ಪಾಠಶಾಲೆ ಜನನಿ ತಾನೆ ಮೊದಲ ಗುರುವು, ಉತ್ತಮ ವಿದ್ಯಾರ್ಥಿಗಳಾಗಿ ಉತ್ತಮ ವ್ಯಕ್ತಿಗಳಾಗಿ ಹೊರಹೊಮ್ಮಬೇಕು, ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಹಾಲಸ್ವಾಮಿ ಇವರು ಅಧ್ಯಕ್ಷೀಯ ನುಡಿಗಳನ್ನಾಡಿ ಶ್ರೀಶಾ ಕಲಾ ವೇದಿಕೆಯು ಸಮಾಜಮುಖಿ ಕಾರ್ಯ ಸ್ತುತ್ಯಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳ ಪ್ರತಿಭೆಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಾ ಬರುತ್ತಿರುವ ಆಶಾ ಶ್ರೀಧರ್ ಈ ವರ್ಷವೂ ಸಹ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಒಂದನೇ ತರಗತಿಯಿಂದ ಏಳನೇ ತರಗತಿಯ ಮಕ್ಕಳಿಗೆ ಸಂಸ್ಥೆಯ ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು.
ಶಿಕ್ಷಕಿಯರಾದ ಜಯಶೀಲ, ಕೋಮಲ, ವೀಣಾ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ
ಕು.ನಿಖಿತಾ ಪ್ರಾರ್ಥಿಸಿ, ಶ್ರೀಧರ್ ಸ್ವಾಗತಿಸಿದರೆ. ಭಾರತಿ ಜಯರಾಮ್ ನಿರೂಪಿಸಿದರು.
ಸಂಸ್ಥೆಯ ಉಮೇಶ್ ಸಿ.ಎನ್., ಭಾರತಿ ಜಯರಾಮ್, ಶಾಂತಮ್ಮ, ಸುಹಾಸ್ ಆರ್.ಎಸ್.ಶಾಂತಾಲಕ್ಷ್ಮೀ ಇನ್ನಿತರರಿದ್ದರು.