ವಿಜಯ ಸಂಘರ್ಷ
ಸಾಗರ: ನೈಸರ್ಗಿಕವಾದ ಪರಿಸರ ನಮಗೆಲ್ಲವನ್ನೂ ಕೊಟ್ಟಿದೆ ಅದರ ಮಕ್ಕಳಾದ ನಾವು ಅದನ್ನು ಪ್ರೀತಿಸುವುದ ರೊಂದಿಗೆ ಅದನ್ನು ಉಳಿಸಿ, ಕಾಪಾಡಿ ಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ. ನಿಮ್ಮ ಜನ್ಮದಿನದಂದು ಒಂದು ಗಿಡವನ್ನು ನೆಟ್ಟು ಅದರ ಪಾಲನೆಯನ್ನು ನಿರಂತರ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ ಎಂದು ವಲಯ ಅರಣ್ಯಾಧಿಕಾರಿ ಜಿ.ಎಸ್ ರವಿಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅವರು ಆನಂದಪುರ ಪಟ್ಟಣಕ್ಕೆ ಸಮೀಪದ ಯಡೇಹಳ್ಳಿಯ ಇಂದಿರಾ ಗಾoಧಿ ವಸತಿ ಶಾಲೆಯಲ್ಲಿ ನಡೆದ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಪಠ್ಯ ಹಾಗೂ ಕ್ರೀಡೆಯೊಂದಿಗೆ ಪರಿಸರ ಪ್ರೇಮವನ್ನು ಸಹ ಬೆಳಸಿಕೊಳ್ಳಬೇಕು.ಒಂದು ಮರ ಕಡಿಯುವ ಅನಿವಾರ್ಯತೆ ಇದ್ದರೆ ಅದರ ಬದಲಿಗೆ ಹತ್ತು ಗಿಡಗಳನ್ನು ನೆಟ್ಟು ಬೆಳೆಸುವ ಪರಿಪಾಠ ರೂಢಿಸಿಕೊಳ್ಳಬೇಕು ಆಗ ಮಾತ್ರ ಪರಿಸರದ ಮೇಲಾಗುತ್ತಿರುವ ಪ್ರತಿಕೂಲ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗುತ್ತದೆ ಎಂದರು.
ಪಠ್ಯದೊಂದಿಗೆ ಕ್ರೀಡಾ ಚಟುವಟಿಕೆಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಮತೋಲನಕ್ಕೆ ಸಹಕಾರಿಯಾಗುತ್ತದೆ.
ಇವೆರಡೂ ಒಂದಕ್ಕೊoದು ಪೂರಕವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಣುಕ ದಿನೇಶ್, ಉಪಾಧ್ಯಕ್ಷ ನಾರಿಲೋಕಪ್ಪ, ಸದಸ್ಯರಾದ ಚೇತನಾ ರಾಘವೇಂದ್ರ, ವೀಣಾಕುಮಾರಿ, ನಟರಾಜ್ ಗೇರುಬೀಸು, ಅರುಣ್‌ಕುಮಾರ್ ಗೌಡ ಕರಡೀಮನೆ, ಸಾಗರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್ ಯಡೇಹಳ್ಳಿ,ಪ್ರಾಂಶುಪಾಲ ಚಂದ್ರಶೇಖರ್ ಬಿ, ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಹಾಜರಿದ್ದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ಆಟೋಟಗಳಲ್ಲಿ ಭಾಗವಹಿಸಿದರು.
Tags:
ಅನಂದಪುರ ಸ್ಕೂಲ್ ಸುದ್ದಿ