ಭದ್ರಾವತಿ: ಸರ್ಕಾರಿ ಶಾಲೆಗಳ ದಾಖಲಾತಿ ಹೆಚ್ಚಿಸಲು ಹಾಗೂ ಶಾಲೆಗಳನ್ನು ಉಳಿಸಲು ಪೋಷಕರು ಮನಸು ಮಾಡಿ ಸರ್ಕಾರಿ ಶಾಲೆಗೆ ಮಕ್ಕಳ ಸೇರಿಸಿ ಎಂದು ಡಾ.ಬಿದರಗೋಡು ನಾಗೇಶ್ ತಿಳಿಸಿದರು.
ತಾಲ್ಲೂಕಿನ ಯರೇಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಮಗುವಿನ ಕಲಿಕೆಗೆ ಸರ್ಕಾರದ ಸೌಲಭ್ಯ ಬಳಸಿಕೊಂಡು ಶಾಲೆಗಳ ಉಳಿಸಲು ಅಮೃತ ಮಹೋತ್ಸವ ದಂತ ಕಾರ್ಯಕ್ರಮಗಳು ಪ್ರಯೋಜನ ಕಾರಿ.ಅದರ ಉಳಿವಿಗಾಗಿ ಬೆಳವಣಿಗೆಗಾಗಿ ಶಿಕ್ಷಕರ ಶ್ರಮ ಮುಖ್ಯ ಹಾಗೂ ಸಮುದಾಯದ ಸಹಕಾರ ಅಗತ್ಯ ಎಂದರು.
ಬ್ಲಾಕ್ ಹಾಗೂ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಸ್.ಕುಮಾರ್, ಎಚ್ ಷಡಕ್ಷರಿ, ಅಂತರಗಂಗೆ ಗ್ರಾಮ ಪಂಚಾಯತ್ ಅಧ್ಯಕ್ಷ ನಾಗೇಶ್, ಎಸ್ಡಿಎಂಸಿ ಅಧ್ಯಕ್ಷ ಕೃಷ್ಣ ಮೂರ್ತಿ,ಯುವ ಮುಖಂಡ ಬಿ.ಎಸ್.ಗಣೇಶ್, ಹಳೆಯ ವಿದ್ಯಾರ್ಥಿ ಸಂಘದ ರಮೇಶ್, ಮಂಜುನಾಥ್, ಜೈ ಕುಮಾರ್, ಪ್ರಕಾಶ್, ಬಸವರಾಜ್, ಪರುಶುರಾಮ್, ರಾಕೇಶ್, ಜಾನಾನಾಯ್ಕ್, ದಾನಿ ಉಮಾ ಮಹೇಶ್, ಸುರೇಶ್, ಉಮೇಶ್ ಬಾಬು,ಯೋಗಾನಂದ, ವಿಠಲ್ ರಾವ್, ಸಾಹಿತಿ ಬಸವರಾಜ್, ವಾಣಿಶ್ರೀ ಪಾಟೀಲ್, ಆನಂದಪ್ಪ, ಅನಿತಾ,ಶಾಲಾ ಶಿಕ್ಷಕರು,ಕಿರಣ್, ಮಲ್ಲಿಕ್ ನಾಯ್ಕ್ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಅಧ್ಯಕ್ಷತೆಯಲ್ಲಿ ಸ್ನೇಹ ಸಮ್ಮಿಲನ ಸಮಾವೇಶ ಯಶಸ್ವಿಯಾಗಿ ನಡೆಯಿತು. ಹತ್ತಾರು ಹಳೆಯ ವಿದ್ಯಾರ್ಥಿಗಳು ತಮ್ಮ ಬಾಲ್ಯದ ಸವಿ ನೆನಪು ಹಂಚಿಕೊಡರು. ಗ್ರಾಮದ ಹಿರಿಯ ಪುಟ್ಟಪ್ಪ ಉದ್ಘಾಟನೆ ನೆರವೇರಿಸಿ ಐತಿಹಾಸಿಕ ಸಮಾರಂಭ ಸಂಘಟಿಸಿದ ಮುಖ್ಯ ಶಿಕ್ಷಕ ಕೋಗಲೂರು ತಿಪ್ಪೇಸ್ವಾಮಿ ಮತ್ತು ಸಮಿತಿ ಯವರನ್ನು ಅಭಿನಂದಿಸಿದರು.
ಮೊದಲ ಭಾರಿ ಶಾಲಾ ಅಮೃತ ಮಹೋತ್ಸವ ದ ವೇದಿಕೆಯ ಕವಿಗೋಷ್ಠಿಯಲ್ಲಿ ಮುಖ್ಯಶಿಕ್ಷಕ
ಕೋಗಲೂರು ತಿಪ್ಪೇಸ್ವಾಮಿ ಅಧ್ಯಕ್ಷತೆ ಯಲ್ಲಿ ನಡೆಯಿತು. ಗೋಷ್ಠಿಯಲ್ಲಿ ಈ ಭಾಗಕ್ಕೆ ಸೇರಿದ ಸತೀಶ್ ಪಿ.ಕೆ, ನಾಗೋಜಿ ರಾವ್,ಕಾಂತಪ್ಪ, ಹನುಮಂತಪ್ಪ, ವಿಠಲ್ ರಾವ್, ಚಂದ್ರಶೇಖರ ಈ, ಮಂಜುನಾಥ್ ಈ, ಮಂಜು ಸಿ, ಶಿವಕುಮಾರ್, ಜಯಕುಮಾರ್, ಉಮರ್ ಕೋಯಾ, ನಿತಿನ್ ಇದ್ದರು.
ಆಕಾಶವಾಣಿ ಕಲಾವಿದರಾದ ಕೆಂಚಮ್ಮ ಸಂಗಡಿಗರು ಜಾನಪದ ಗೀತೆ ಹಾಡಿದರು.ಚನ್ನಬಸಪ್ಪ, ಶ್ರೀನಿವಾಸ, ಮೋಹನ್ ಹಾಗೂ ಅಣ್ಣಪಣ್ಣ, ಚಂದ್ರಪ್ಪ, ಗುರುಮೂರ್ತಿ ಇವರನ್ನು ಸನ್ಮಾನಿಸಲಾಯಿತು.
ಸುನಿಲ್ ಸ್ವಾಗತಿಸಿ, ವಾಣಿಶ್ರೀ ವಂದಿಸಿದರು.