ಸಭ್ಯತೆ ರೂಢಿಸಿಕೊಂಡಾಗ ಸಮಾಜದಲ್ಲಿ ಶಾಂತಿ: ಫಾದರ್ ಮಿನಿನ್ ಅಲ್ಮೆಡಾ


ವಿಜಯ ಸಂಘರ್ಷ
ಸಾಗರ: ಅಹಿಂಸೆ, ಪರೋಪಕಾರ, ಸತ್ಯದ ಮಾತುಗಳು, ಸಭ್ಯ ವರ್ತನೆಗಳನ್ನು ರೂಢಿಸಿಕೊಂಡಾಗ ಸಮಾಜದಲ್ಲಿ ಶಾಂತಿ ತನ್ನಿಂದ ತಾನೇ ನಿರ್ಮಾಣಗೊಳ್ಳುತ್ತದೆ ಕರ್ತನಾದ ಯೇಸುಕ್ರಿಸ್ತನ ಶಾಂತಿ ಹಾಗೂ ಸಹೋದರತ್ವದ ಸಂದೇಶಗಳು ಎಂದೆoದಿಗೂ ಪ್ರಸ್ತುತವಾಗಿದೆ ಎಂದು ರೆವರೆಂಡ್ ಫಾದರ್ ಮಿನಿನ್ ಅಲ್ಮೆಡಾ ರವರು ಹೇಳಿದರು.

ಅವರು ಆನಂದಪುರ ಸಮೀಪದ ಯಡೇಹಳ್ಳಿಯ ಸಂತ ಜೂದರ ಚರ್ಚ್ನಲ್ಲಿ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಯೇಸು ಈ ಜಗತ್ತಿನ ಪಾಪಿ ಜನರನ್ನು ಉದ್ಧರಿಸಲು ಮನುಷ್ಯ ರೂಪದಲ್ಲಿ ಜನಿಸಿ ಸಕಲ ವೈಭೋಗಗಳನ್ನೆಲ್ಲಾ ತೊರೆದು ಜೀವನವನ್ನು ಹೇಗೆ ಸಾರ್ಥಕಗೊಳಿಸಿ ಕೊಳ್ಳಬೇಕೆಂಬ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಕ್ರಿಸ್ತನ ಜನ್ಮದಿನ ಕ್ರಿಸ್ತ ತನ್ನ ದೈವತ್ವವನ್ನು ತೊರೆದು ಈ ಲೋಕದಲ್ಲಿ ಮಾನವನಾಗಿ, ನಮಗಾಗಿ ಜೀವಿಸಿ ನಮಗೆಲ್ಲಾ ಪ್ರೀತಿಯನ್ನು ಉಣಬಡಿಸಿ ನಮ್ಮೆಲ್ಲರನ್ನೂ ಪುನ: ದೇವರತ್ತ ಕರೆದುಕೊಂಡು ಹೋಗುವುದಕ್ಕೆ ಬಂದಿರುವoತಹದ್ದಾಗಿದೆ.

ದೇವರು ಪ್ರೀತಿಯ ಸ್ವರೂಪ ಅದನ್ನು ಮನುಷ್ಯಲೋಕಕ್ಕಾಗಿ ಕೊಟ್ಟಿರುವ ಮಹತ್ವದ ಕ್ಷಣ ಇದಾಗಿದೆ. ನಾವು ನಮ್ಮ ಪ್ರೀತಿಯನ್ನು ಸಕಲರಿಗೆ ತೋರಬೇಕು.ಅದರಲ್ಲೂ ಬಡವರೊಡನೆ ಹಂಚಿಕೊಳ್ಳಬೇಕು. ನೊಂದವರಲ್ಲಿ ಭರವಸೆಯನ್ನು ಮೂಡಿಸಿ ಜೀವನೋತ್ಸಾಹವನ್ನು ಮೂಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಹೇಳಿದರು.

(ವರದಿ ಎಸ್. ಡಿ.ಚಂದ್ರಶೇಖರ ಆನಂದಪುರ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು