ಶಿಕಾರಿಪುರ: ಹೊಸ ವರ್ಷವನ್ನು ಅರ್ಥಪೂರ್ಣವಾಗಿ ಸ್ವಾಗತಿಸುವ ಸಲುವಾಗಿ ಪಟ್ಟಣದ ನರಸಪ್ಪ ಸ್ಮಾರಕ ಬಯಲು ರಂಗ ಮಂದಿರದಲ್ಲಿ ಉಳ್ಳಿ ಫೌಂಡೇಶನ್ ಹಾಗೂ ಕದಂಬ ಫ್ರೆಂಡ್ಸ್ ಕ್ಲಬ್ ವತಿಯಿಂದ ಡಯಾಲಿಸಿಸ್ ರೋಗಿಗಳಿಗೆ ಸಹಾಯ ಹಸ್ತ ಕಾರ್ಯಕ್ರಮವನ್ನು ಹಮ್ಮಿಕೊಂಡು ಕಿರುತರೆ ನಟ ನಟಿಯರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪುರಸಭಾ ಸದಸ್ಯ ಕಾಂಗ್ರೆಸ್ ಮುಖಂಡ ಉಳ್ಳಿ ದರ್ಶನ್ ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹೊಸ ವರ್ಷ ಎಂದರೆ ಕುಡಿದು ಮೋಜು ಮಸ್ತಿ ಮಾಡುವುದನ್ನೇ ಇಂದಿನ ಯುವಕರು ಹೊಸ ವರ್ಷಾಚರಣೆ ಎಂದು ಕೊಂಡಿದ್ದಾರೆ. ವಿದೇಶ ವ್ಯಾಮೋಹದ ಸಂಸ್ಕೃತಿಗೆ ಒಳಗಾಗಿ ಯುವ ಪೀಳಿಗೆ ದಾರಿ ತಪ್ಪುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಈ ಬಾರಿ ನಗರದ ಯುವಕರಿಗೆ ಹಾಗೂ ತಾಲೂಕಿನ ಜನತೆಗೆ ಉಳ್ಳಿ ಪೌಂಡೇಶನ್ ಹಾಗೂ ಕದಂಬ ಫ್ರೆಂಡ್ಸ್ ಕ್ಲಬ್ ವತಿಯಿಂದ ಚಲನಚಿತ್ರ ನಟ ನಟಿಯರು ಹಾಗೂ ಕಿರುತರೆ ನಟ ನಟಿಯರಿಂದ ಮಡೆನೂರು ಮನು ಇವೆಂಟ್ಸ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು ಖ್ಯಾತ ಕಿರುತರೆ ನಟಿ
ಕೆ.ಸುಷ್ಮಾರಾವ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಾಸ್ಯ ನಟ ಸೇರಿದಂತೆ ಕಿರುತೆರೆಯ ಪ್ರಸಿದ್ಧ ನಟರಾದ ಮಡೆನೂರು ಮನು, ಕಾಮಿಡಿ ಕಿಲಾಡಿಗಳು ನಟ ದೀಕ್ಷಿತ್ ಗೌಡ, ಚಿತ್ರನಟ ಅಂಕುಶ್ ಏಕಲವ್ಯ, ಗಾಯಕ ಅಂಜನ್ ಕುಮಾರ್, ಸರಿಗಮಪ ಕಾರ್ಯಕ್ರಮದ ಗಾಯಕಿ ಆಶಾಭಟ್, ಜೂನಿಯರ್ ಪುನೀತ್ ರಾಜಕುಮಾರ್, ಜೂನಿಯರ್ ಉಪೇಂದ್ರ, ಜೂನಿಯರ್ ಯಶ್ ಹಾಗೂ ಡಿಕೆಡಿ ಡ್ಯಾನ್ಸ್ ಗ್ರೂಪ್ ತಂಡದವರಿಂದ ಭರ್ಜರಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಿ: 31ರ ಸಂಜೆ 7:30 ರಿಂದ ಹೊಸ ವರ್ಷ ಆಚರಣೆಯ ನೂತನ ವಿನೂತನ ಸಾಂಸ್ಕೃತಿಕ ಕಾರ್ಯ ಕ್ರಮಕ್ಕೆ ವಿವಿಧ ಗಣ್ಯರು ಆಗಮಿಸಲಿದ್ದು ಸಾರ್ವಜನಿಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಕೋರಿದರು.
(ವರದಿ ಹುಲಿಗೆ ಕೃಷ್ಣ ಶಿಕಾರಿಪುರ)
Tags:
ಶಿಕಾರಿಪುರ ನ್ಯೂಸ್