ವಿಜಯ ಸಂಘರ್ಷ
ಶಿವಮೊಗ್ಗ: ಜಿಲ್ಲಾ ಕುಳುವ ಯುವ ಸೇನೆಯ ಜಿಲ್ಲಾಧ್ಯಕ್ಷರಾಗಿ ಲೋಕೇಶ್ ಫೈಲ್ವಾನ್ ನೇಮಕಗೊಂಡರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಮಾತಾನಾಡಿದ ಲೋಕೇಶ್ ಡಿ:23 ರಂದು ಅಧಿಕೃತವಾಗಿ ಕುಳುವ ಯುವ ಸೇನೆಯ ಮೊದಲ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸೇನೆಯ ಸದಸ್ಯತ್ವ ಅಭಿಯಾನದ ಪೋಸ್ಟರ್ ಪತ್ರಕರ್ತರಾದ ಗಾ.ರಾ.ಶ್ರೀನಿವಾಸ್ ರವರಿಂದ ಚಾಲನೆ ನೀಡುತ್ತಿದ್ದೇವೆ.
ಕರ್ನಾಟಕದಲ್ಲಿ ಯುವಕರಿಗಾಗಿ ಪಡೆ ಇದಾಗಿದ್ದು ಮೊದಲ ಸಂಘಟನೆ ಎಂದೇ ಹೇಳಲು ಬಲು ನೋವಿನ ಸಂಗತಿಯಾಗಿದೆ, ಯುವಕರಿಂದ-ಯುವಕರಿಗಾಗಿ ನಾವುಗಳು ಸಂಘಟಿತ ವಾಗಿ ನಿಲ್ಲುವ ಈ ಸಂದರ್ಭದ ತನಕದಿ ಶತಮಾನಗಳೇ ಮುಗಿದು ಹೋಗಿದೆ, ಇದೀಗ ಸರಳವಾಗಿ, ಸಣ್ಣ ಮಟ್ಟದಲ್ಲಿ ಈ ಸೇನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಇಂದು ನಾವೆಲ್ಲಾ ಸೇರಿಕೊಂಡಿರುವುದು ಜಾಗೃತದ ಸಂದೇಶವಾಗಿದೆ ಎಂದು ಲೋಕೇಶ್ ಫೈಲ್ವಾನ್ ಅಭಿಪ್ರಾಯಿಸಿದರು.
ಇನ್ನೂ ಸಮುದಾಯದ ಮೇಲಿನ ಅನ್ಯಾಯ, ದಬ್ಬಾಳಿಕೆಗಳ ವಿರುದ್ದ ಸಿಡಿದೇಳುವ, ಕಾನೂನಾತ್ಮಕವಾಗಿ ಪ್ರತಿಭಟಿಸುವ ಕುಳುವ ಯುವ ಸೇನೆಯು ಸನ್ನದ್ದವಾಗಿದೆ ಎಂದರು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕೊರಮ, ಕೊರಮ ಶೆಟ್ಟಿ, ಕೊರಚ,ಕೊರವರ್, ಭಜಂತ್ರಿ, ಇನ್ನುಳಿದ ಉಪ ಪಂಗಡಗಳ ಸಮುದಾಯದ ಯುವಕರಿಗೆ ಸದಸ್ಯತ್ವವನ್ನು ಪಡೆಯಲು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಿಗೆ ಶುಭ ಹಾರೈಸಿ ಪೋಸ್ಟರ್ ಬಿಡುಗಡೆಗೊಳಿಸಿದ ಪತ್ರಕರ್ತ ಗಾ.ರಾ.ಶ್ರೀನಿವಾಸ್ ಸೇರಿದಂತೆ ಚಂದ್ರಪ್ಪ, ದೇವರಾಜ್, ನಾಗೇಶ್, ಗೋವಿಂದಪ್ಪ, ಕಾಮೇಶ್, ಸುರೇಶ್, ಗುರು, ರಂಗನಾಥ್, ರಮೇಶ್ ದೇವೇಂದ್ರಪ್ಪ, ಸುಚಿತ್, ಕುಮಾರ್ ಚಂದನಕೇರೆ ಹಾಗೂ ಇತರರು ಉಪಸ್ಥಿತರಿದ್ದರು.