ಪತ್ರಿಕಾ ವಿತರಕರಿಗೆ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ

ವಿಜಯ ಸಂಘರ್ಷ
ಶಿವಮೊಗ್ಗ: ನಗರದ ಮೀಡಿಯಾ ಹೌಸ್‌ನಲ್ಲಿ ಪತ್ರಿಕಾ ವಿತರಕರಿಗೆ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮ ನಡೆಯಿತು.

ಇತ್ತೀಚೆಗೆ ಸಾಗರದಲ್ಲಿ ಪತ್ರಿಕಾ ವಿತರಕ ಯುವಕ ಗಣೇಶ್ ಅಪಘಾತದಲ್ಲಿ ಮೃತಪಟ್ಟಿದ್ದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಗಮನ ಸೆಳೆಯಲಾಗಿತ್ತು. ಕಾರ್ಮಿಕ ಸಚಿವರಿಗೂ ಗಮನಕ್ಕೆ ತಂದಿತ್ತು. ತಕ್ಷಣ ಸ್ಪಂದಿಸಿದ ಸರ್ಕಾರ ಪತ್ರಿಕಾ ವಿತರಕರಿಗೆ ಅಪಘಾತವಾಗಿ ಮರಣ ಪಟ್ಟಲ್ಲಿ 2 ಲಕ್ಷ ರೂ.ಗಳ ಸಹಾಯ ಧನ ನೀಡುವ ಯೋಜನೆಯನ್ನು ಪ್ರಕಟಿಸಿದೆ ಎಂದು ಪತ್ರಕರ್ತರ ಸಂಘದ ರಾಜ್ಯ ನಿರ್ದೇಶಕ ಎನ್. ರವಿಕುಮಾರ್ ಹೇಳಿದರು.

ಕಾರ್ಮಿಕ ಇಲಾಖೆಯ ಅಧಿಕಾರಿ ಸುಮಾ ಮಾತನಾಡಿ, ಕರ್ನಾಟಕ ರಾಜ್ಯ ಇ-ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಫ್ಲಿಪ್‌ಕಾರ್ಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಪೊ ಬಿಗ್ ಬಾಸ್ಕೆಟ್, ಡೊಮಿನೊಸ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತ್ತಿಯಲ್ಲಿ ತೊಡಗಿರುವ ಗಿಗ್ ಕಾರ್ಮಿಕರಿಗೆ ದೇಶದಲ್ಲಿಯೇ ಮೊದಲ ಬಾರಿಗೆ ವಿಮಾ ಯೋಜನೆ ಜಾರಿಯಾಗಿದೆ. ಎಲ್ಲಾ ಅರ್ಹ ಅಸಂಘಟಿತ ಗಿಗ್ ಕಾರ್ಮಿಕರಿಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸ ಬಹುದಾಗಿದೆ ಎಂದರು.

ವಿಮಾ ಸೌಲಭ್ಯವು ಕರ್ತವ್ಯದಲ್ಲಿರುವಾಗ, ಇಲ್ಲದಿರುವಾಗ ಸಂಭವಿಸುವ ಅಪಘಾತ ಗಳಿಗೂ ಅನ್ವಯವಾಗಲಿದ್ದು, ಯೋಜನೆ ಸಂಪೂರ್ಣ ಉಚಿತ, ಯಾವುದೇ ರೀತಿಯ ಪ್ರೀಮಿಯಂ ಪಾವತಿಸುವ ಅಗತ್ಯ ಇರುವುದಿಲ್ಲ. ಅಪಘಾತದಲ್ಲಿ ಮರಣ ಹೊಂದಿದ್ದಲ್ಲಿ ವಿಮಾ ಪರಿಹಾರ 2 ಲಕ್ಷ ರೂ. ಹಾಗೂ ಜೀವ ವಿಮಾ 2 ಲಕ್ಷ ರೂ. ಸೇರಿ ಒಟ್ಟು 4 ಲಕ್ಷ ರೂ, ಅಪಘಾತದಿಂದ ಶಾಶ್ವತ ದುರ್ಬಲ ಹೊಂದಿದ್ದಲ್ಲಿ 2 ಲಕ್ಷ ರೂ ವರೆಗೆ ಸೌಲಭ್ಯ, ಆಸ್ಪತ್ರೆ ವೆಚ್ಚ ಮರುಪಾವತಿ ಒಂದು ಲಕ್ಷ ರೂ. ವರೆಗೆ ಸೌಲಭ್ಯಗಳು ಇರುತ್ತದೆ.
18ರಿಂದ 59 ವರ್ಷದೊಳಗಿನ ಗಿಗ್ ಕಾರ್ಮಿಕರು ಸೇವಾಸಿಂಧು ಪೋರ್ಟಲ್ ಮೂಲಕ ತಮ್ಮ ಹೆಸರು ನೋಂದಾಯಿಸ ಬೇಕು. ಆದಾಯ ತೆರಿಗೆ ಪಾವತಿದಾರರಾಗಿರ ಬಾರದು, ಭವಿಷ್ಯನಿಧಿ ಹಾಗೂ ಇಎಸ್‌ಐ ಫಲಾನುಭವಿಯಾಗಿರಬಾರದು ಹಾಗೂ ಕರ್ನಾಟಕದಲ್ಲಿ ಡೆಲಿವರಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಮಾತ್ರ ಅನ್ವಯಿಸುತ್ತದೆ.

ಆಧಾರ್ ಸಂಖ್ಯೆ, ವೃತ್ತಿ ನಿರ್ವಹಿಸುತ್ತಿರುವ ಸಂಸ್ಥೆಗಳು ವಿತರಿಸಿದ ಗುರುತಿನ ಚೀಟಿ, ವೇತನ ಚೀಟಿ, ವೇತನ ಪಡೆದ ಬ್ಯಾಂಕ್ ಪಾಸ್‌ಬುಕ್ ಹಾಗೂ ಇ-ಶ್ರಮ್ ಕಾರ್ಡ್ ಈ ಎಲ್ಲಾ ದಾಖಲಾ ತಿಗಳನ್ನು ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಕಾರ್ಮಿಕ ನಿರೀಕ್ಷಕರುಗಳ ಕಚೇರಿಯ ಕಾರ್ಮಿಕ ಅಧಿಕಾರಿ ದೂ.ಸಂ. 08182-258940 ನ್ನು ಸಂಪರ್ಕಿಸಬಹುದು ಹಾಗೂ ಶಿವಮೊಗ್ಗ ಜಿಲ್ಲೆಯ ಕಾರ್ಮಿಕ ಅಧಿಕಾರಿಯವರ ಕಚೇರಿ ಅಥವಾ ಕಾರ್ಮಿಕ ನಿರೀಕ್ಷಕರ ಕಚೇರಿ ಶಿವಮೊಗ್ಗ, ಭದ್ರಾವತಿ, ಸೊರಬ, ಸಾಗರ, ಹೊಸನಗರ, ತೀರ್ಥಹಳ್ಳಿ, ಶಿಕಾರಿಪುರ ಕಚೇರಿಗಳನ್ನು ಸಂಪರ್ಕಿಸಬಹುದೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕ ಒಕ್ಕೂಟ ಶಿವಮೊಗ್ಗ ಜಿಲ್ಲಾಧ್ಯಕ್ಷ ಮಾಲತೇಶ್, ಉಪಾಧ್ಯಕ್ಷ ರಾಮು.ಜಿ ಪ್ರಧಾನ ಕಾರ್ಯದರ್ಶಿ ಮುಕ್ತಿಯರ್ ಅಹಮದ್(ನಜೀರ್ ) ಹುಲಿಗಿ ಕೃಷ್ಣ,  ಸಂಘದ ಕಾರ್ಯದರ್ಶಿ ಅರುಣ್, ಶಿವಮೊಗ್ಗ ಟೆಲೆಕ್ಸ್ ಸಂಪಾದಕ ರವಿಕುಮಾರ್ ಕಾರ್ಮಿಕ ಅಧಿಕಾರಿ ಸುಮಾ ಪತ್ರಿಕಾ ವಿತರಕರ ಒಕ್ಕೂಟದ ಪದಾಧಿಕಾರಿಗಳಾದ ಭದ್ರಾವತಿ ಪರಶುರಾಮ್, ಏಜೆಂಟರಾದ ಉಮೇಶ್. ಮೂಲ ಸಾಬ್. ಸತೀಶ್. ತೊಗಶಿ ವಾಲಿ ಮೊದಲಾದವರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು