ವಿಜಯ ಸಂಘರ್ಷ
ಭದ್ರಾವತಿ: ಪವಿತ್ರ ವೈಕುಂಠ ಏಕಾದಶಿ ಅಂಗವಾಗಿ ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ವೈಕುಂಠನಾಥ ಶ್ರೀ ಹರಿಯ ದರ್ಶನ ಅದ್ದೂರಿಯಾಗಿ ಆರಂಭವಾಯಿತು.
ವೈಕುಂಠ ಏಕಾದಶಿ ಅಂಗವಾಗಿ ಇಂದು ನಸುಕಿನಿಂದಲೇ ಮೂಲ ದೇವರಿಗೆ ವಿಶೇಷ ಪೂಜೆ, ಅಲಂಕಾರ ನಡೆಯಿತು.
ವಿಶೇಷವಾಗಿ, ವೈಕುಂಠದಲ್ಲಿ ಶ್ರೀ ಲಕ್ಷ್ಮೀಯೊಂದಿಗೆ ಕುಳಿತಿರುವ ಶ್ರೀ ಹರಿಯ ಅಲಂಕಾರ ಮಾಡಲಾಗಿದೆ. ನಸುಕಿನ 4 ಗಂಟೆಯಿಂದ ಉತ್ಸವ ಮೂರ್ತಿಗೆ ವಿಶೇಷ ಪೂಜೆ, ದೇವಾಲಯದಲ್ಲಿ ಪ್ರಕಾರದಲ್ಲಿ ಉತ್ಸವ ನಡೆಯಿತು. ಅನಂತರ ವೈಕುಂಠದ ಸಪ್ತದ್ವಾರಗಳನ್ನು ತೆರೆಯಲಾಯಿತು.
ದೇವಾಲಯದ ಪ್ರಧಾನ ಅರ್ಚಕ ರಂಗನಾಥ್ ಶರ್ಮ, ಸಹಾಯಕ ಅರ್ಚಕ ಶ್ರೀನಿವಾಸ್ ಅವರ ನೇತ್ರತ್ವದಲ್ಲಿ ಪೂಜೆಗಳು ನಡೆಯಿತು.
ವೈಕುಂಠನಾಥನ ದರ್ಶನ ಪಡೆಯಲು ನಸುಕಿನ 3 ಗಂಟೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದರು.
ಉಪವಿಭಾಗಧಿಕಾರಿ, ತಹಶೀಲ್ದಾರ್, ನ್ಯಾಯಾಧೀಶರು, ದೇವಾಲಯ ಸಮಿತಿ ಅಧ್ಯಕ್ಷ ಮಾರುತಿ, ಪ್ರಮುಖರಾದ ನರಸಿಂಹಚಾರ್, ರಾಮಕಾಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.