ವಿಜಯ ಸಂಘರ್ಷ
ಭದ್ರಾವತಿ: ವೃದ್ದಾಶ್ರಮ ಹಾಗೂ ಅನಾಥಾಶ್ರಮದ ಸಂಸ್ಥಾಪಕರಾಗಿ ಎಲ್ಲೋ ವಿಜೃಂಭಣೆಯಿಂದ ಜನ್ಮ ದಿನಾಚರಣೆಯ ಆಚರಿಸಿಕೊಂಡಲ್ಲಿ ಅರ್ಥವಿಲ್ಲ. ಆಶ್ರಮದ ತಾಯಂದಿರ ಆಶೀರ್ವಾದಕ್ಕಾಗಿ ಹಿರಿಯರ ಸಮ್ಮುಖದಲ್ಲಿ ಆಚರಣೆ ಅದ್ಬುತ ಎಂದು ಸುರಕ್ಷಾ ಜೀವನ ವೃದ್ದಾಶ್ರಮ ಮತ್ತು ಅನಾಥಾಶ್ರಮದ ಸಂಸ್ಥಾಪಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಹೇಳಿದರು.
ಇಂದು ಸಿದ್ದಾಪುರದಲ್ಲಿನ ತಮ್ಮ ಒಡೆತನದ ಸುರಕ್ಷಾ ಜೀವನ ವೃದ್ದಾಶ್ರಮ ಮತ್ತು ಅನಾಥಾಶ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಉಪಾಧ್ಯಕ್ಷರಾದ ಪುಷ್ಪ, ಸಾಂಸ್ಕೃತಿಕ ಘಟಕದ ಅಧ್ಯಕ್ಷೆ ಚೇತನ ಶೆಟ್ಟಿ, ಕಾರ್ಯದರ್ಶಿ ಶಾರದಾ ತಾಲೂಕು ಅಧ್ಯಕ್ಷೆ ಮಹೇಶ್ವರಿ ಸೇರಿದಂತೆ ಆಶ್ರಮದ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.