ವಿಜಯ ಸಂಘರ್ಷ
ಶಿಕಾರಿಪುರ: ತಾಲೂಕಿನ ಹೊಸೂರು ಹೋಬಳಿಯ ಗ್ರಾಮಲೆಕ್ಕಿಗರು ಹಾಗೂ ಕಂದಾಯಧಿಕಾರಿಗಳು ತಮ್ಮ ಹೋಬಳಿಗೆ ಸಂಬಂಧಿಸಿದ ಹಳ್ಳಿಗಳಲ್ಲಿಯೇ ಕರ್ತವ್ಯ ನಿರ್ವಹಿಸಬೇಕು ಎಂದು ಆದೇಶವಿದ್ದರೂ ಕೂಡ ಗ್ರಾಮಲೆಕ್ಕಿಗರು ನಗರದ ಖಾಸಗಿ ಕಟ್ಟಡಗಳಲ್ಲಿ ತಮ್ಮ ಮನಸ್ಸಿಗೆ ಬಂದಂತೆ ಖಾಸಗಿ ಕಟ್ಟಡಗಳಲ್ಲಿಯ ಕಚೇರಿ ತೆರೆದಿದ್ದಾರೆ, ಜನಸಾಮಾನ್ಯ ರಿಂದ ಹಣ ವಸೂಲಿ ಮಾಡುವ ದಂಧೆಗೆ ನಿಂತಿದ್ದಾರೆ ಎಂದು ಆರೋಪಿಸಿ ರಾಜ್ಯ ಶಕ್ತಿ ಸಂಗ್ರಾಮ ವೇದಿಕೆ ಹಾಗೂ ಭ್ರಷ್ಟಾಚಾರ ವಿರೋಧಿ ವೇದಿಕೆ ಸಂಘಟನೆಯ ಮುಖಂಡರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಾಲೂಕು ಅಧ್ಯಕ್ಷ ಆನಂದ್, ಹೊಸೂರು ಹೋಬಳಿಯ ಆರ್ ಐ ಶಿವಣ್ಣ ಸೇರಿದಂತೆ ಗ್ರಾಮ ಲೆಕ್ಕಿಗರಾದ ಅರುಣ್ , ಸುಮಿತ್ರಾ ಬಾಯಿ, ಪ್ರವೀಣ್ ಕುಮಾರ್, ಉಮಾಶಂಕರ್, ಕುಮಾರಸ್ವಾಮಿ, ಮಂಜುನಾಥ್ ನಾಯ್ಕ್ ರವರು ತಮ್ಮ ವ್ಯಾಪ್ತಿಗೆ ಒಳಪಡುವ ಸಂಕ್ಲಾಪುರ, ದಿಂಡದಳ್ಳಿ, ಮಾರವಳ್ಳಿ, ಸುರಗಿಹಳ್ಳಿ, ಮುಗುಳುಗೆರೆ, ಮುದ್ದನಹಳ್ಳಿ, ತುಮರಿ ಹೊಸೂರು, ಹಾಗೂ ಭಗನ ಕಟ್ಟೆ ಗ್ರಾಮಗಳಲ್ಲಿಯೇ ಕಾರ್ಯನಿರ್ವಹಿಸ ಬೇಕಾಗಿದೆ. ಆದರೆ ಇವರಿದ್ದ ಕಡೆ ಗ್ರಾಮಸ್ಥರು ಬರುವಂತೆ ಮಾಡಿ ಕೊಂಡಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ತಮ್ಮ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿಯೇ ಕಚೇರಿ ತೆರೆಯ ಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂತೋಷ್, ಗುತ್ತಿ ಕನ್ನಪ್ಪ, ತೇಜಸ್, ನಾಗಭೂಷಣ್, ಮುಕ್ತಿಯರ್ ಅಹಮದ್ ರವೀಂದ್ರ ಕುಮಾರ್, ವಿಜಯ್ ಕುಮಾರ್, ಸುನಿಲ್, ಅಹಮದ್ ಆಲಿ ಉಪಸ್ಥಿತರಿದ್ದರು.
(ವರದಿ ಹುಲಿಗಿ ಕೃಷ್ಣ)
Tags:
ಶಿಕಾರಿಪುರ ವಿಎ ಆರ್ ಐ ವರದಿ