ಕನ್ನಡ ಭಾಷೆಯ ಉಳಿವಿಗೆ ವಚನ ಸಾಹಿತ್ಯದ ಕೊಡುಗೆ ಅಪಾರ

ವಿಜಯ ಸಂಘರ್ಷ
ಸಾಗರ: ಭ್ರಷ್ಟಾಚಾರದಿಂದ ತುಂಬಿರುವ ಜಗತ್ತು 12ನೇ ಶತಮಾನದಲ್ಲಿ ರಚಿತವಾದ ವಚನಗಳ ತಿರುಳನ್ನು ಅರ್ಥಮಾಡಿಕೊಳ್ಳ ಬೇಕಿದೆ. ಜ್ಞಾನ, ಚಿಂತನೆ, ಅರಿವೆಗೆ ಆದ್ಯತೆ ನೀಡಿದ ಹೆಮ್ಮೆ ನಮ್ಮ ಕನ್ನಡ ನಾಡಿನಾದ್ದಾಗಿದೆ. ಅಂದು ಉತ್ತಮ ಚಿಂತನೆಗಳಿಗೆ ನೈಜ ಮಾನವೀಯತೆಯ ಹಾಸನ್ನು ಹೊದಿಸಿ ಇಂದಿಗೂ ಹಾಗೂ ಮುಂದೆಯೂ ವಚನಗಳು ಪ್ರಸ್ತುತ ವಾದುದು ಎಂದು ಅಖಿಲಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಚ್.ಎನ್.ಮಹಾರುದ್ರ ಅಭಿಪ್ರಾಯಪಟ್ಟರು.

ಅವರು ಆನಂದಪುರ ಮುರುಘಾಮಠ ದಲ್ಲಿ ನಡೆದ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ ಅರ್ಥಹೀನ ಆಚರಣೆಗಳು, ಪದ್ದತಿಗಳು, ಮೇಲು-ಕೀಳು ಎಂಬ ಭಾವನೆಗಳನ್ನು ಜನ ಮಾನಸದಿಂದ ಹೊಡೆದೋಡಿಸುವ ಕೆಲಸವನ್ನು ಅಂದು ವಚನ ಸಾಹಿತ್ಯ ಮಾಡಿತು. ಆದರೂ ಸಹ ಇಂದು ಒಬ್ಬರು ಇನ್ನೊಬ್ಬರನ್ನು ದೂರುವ ಕಾಲದಲ್ಲಿ ಬದುಕುತ್ತಿದ್ದೇವೆ. ಕನ್ನಡ ಭಾಷೆ ಇಂದಿಗೂ ಉಳಿದಿದೆ ಅದರ ವೈಭವತೆಗೆ ವಚನ ಸಾಹಿತ್ಯದ ಕೊಡುಗೆ ಮಹೋನ್ನತ ವಾದುದು. ವಚನಗಳು ಆಚಾರ್ಯರ ಸಾಹಿತ್ಯವಲ್ಲ ಅನುಭಾವಿಗಳ ಸಾಹಿತ್ಯವಾಗಿದೆ. ಮಕ್ಕಳಿಗೆ ವಚನಗಳನ್ನು ಕಲಿಸಿ ಅರ್ಥೈಸಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.

ಆಸೆ, ಹಣ, ಅಧಿಕಾರ ಮುಂತಾದ ಆಮಿಷಕ್ಕೆ ಬಲಿಯಾಗುತ್ತಿರುವ ಜೀವಕ್ಕೆ ಬೇಕಿರುವುದು ಸನ್ಮಾರ್ಗ. ನಮ್ಮ ಜ್ಞಾನವನ್ನು ಸರಿಯಾಗಿ ತಿಳಿದು ಕೊಳ್ಳದೇ ಇರುವುದೇ ಇರುವುದು ಇಂತಹ ದುಷ್ಕರ್ಮಗಳಿಗೆ ಕಾರಣ. ನೈಜ ಜ್ಞಾನದ ಕೊರತೆಯೇ ಇಂದು ಕಾಡುತ್ತಿದೆ ಎಂದರು.

ತಾಳಗುಪ್ಪದ ಶ್ರೀ ಸಿದ್ದವೀರ ಸ್ವಾಮಿಗಳವರು ಮಾತನಾಡಿ ಇಂದು ನಾವು ನಮ್ಮ ಸಂಸ್ಕೃತಿ ಯನ್ನು ಮರೆತಿದ್ದೇವೆ. ಮಗುವಿನ ಹುಟ್ಟು ಹಬ್ಬದಂದು ದೀಪ ಆರಿಸಿ, ಕೇಕ್ ಕತ್ತರಿಸಿ ಆಚರಿಸುವ ವಿದೇಶಿ ಸಂಸ್ಕತಿ ಆವರಿಸಿದೆ. ನಮ್ಮದು ದೇವರಿಗೆ ಗುರು-ಹಿರಿಯರಿಗೆ ನಮಸ್ಕರಿಸಿ ದೀಪ ಬೆಳಗಿಸುವುದೇ ಹೊರತು ಆರಿಸುವುದಲ್ಲ ಎಂಬುದನ್ನು ಮನಗಾಣ ಬೇಕಿದೆ. ಶರಣ ಸಾಹಿತ್ಯವನ್ನು ಸರಿಯಾಗಿ ಅರ್ಥೈಸಿಕೊಳ್ಳುವ ಕೆಲಸವಾಗಬೇಕು. ಧರ್ಮ ಯಾವುದು ಅಧರ್ಮ ಯಾವುದು ಎಂದು ಸರಿಯಾಗಿ ತಿಳಿದುಕೊಂಡು ಬಾಳುವೆ ನಡೆಸಬೇಕೆಂದರು. ವಚನ ಸಂಗೀತ, ಭರತನಾಟ್ಯ,ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಡಾ. ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು , ಶ್ರೀಪ್ರಭುಮಹಾ ಸ್ವಾಮಿಗಳು ಗುತ್ತಲ, ಶ್ರೀ ಅಭಿನವಚನ್ನ ಬಸವಸ್ವಾಮಿ ಮೂಲೆಗದ್ದೆ, ಶ್ರೀಶಿವಲಿಂಗಸ್ವಾಮಿಗಳುಗೇರುಕೊಪ್ಪ, ಶ್ರೀಶಾಂತವೀರ ಸ್ವಾಮಿ ರಾಮದುರ್ಗ, ಶ್ರೀ ನಿರಂಜನ ಚರಮೂರ್ತಿ ಬಸವ ಕಲ್ಯಾಣ , ಶ್ರೀವೀರಭದ್ರ ಶಿವಾಚಾರ್ಯರು ಕಡೆನಂದಿಹಳ್ಳಿ, ನೀಲಕಂಠ ಸ್ವಾಮಿಗಳು ಹಾರ್ನಳ್ಳಿ, ಶ್ರೀ ಪಂಚಾಕ್ಷರಿ ಸ್ವಾಮಿ ಆಡಲಟ್ಟೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ,ರಾಜೇಶ್ ಸುರಗೀಹಳ್ಳಿ, ಆಚಾಪುರ ಗ್ರಾ.ಪಂ. ಅಧ್ಯಕ್ಷ ಖಲೀಮುಲ್ಲಾ ಖಾನ್, ಡಾ.ವೈ,ಬಿ, ಪ್ರಭುದೇವ, ದೀಪೋತ್ಸವ ಸಮಿತಿ ಅಧ್ಯಕ್ಷ ನಾಗರಾಜ ಗೌಡ್ರು ಹರತಾಳು ಉಪಸ್ಥಿತರಿದ್ದರು.

ಹೇಳಿಕೆ:-
“ಸಕಲ ಜೀವರಾಶಿಗಳ ಪ್ರಾಥಮಿಕ ಹಾಗೂ ಮೂಲಭೂತ ಹಕ್ಕು ಆರೋಗ್ಯವಾಗಿದೆ. ಯಾವ ದೇಶದಲ್ಲಿ ಆರೋಗ್ಯವಂತ ಜನರಿದ್ದಾರೋ ಆ ದೇಶ ಸಂಪದ್ಭರಿತ ವಾಗಿರುತ್ತದೆ. ಎಲ್ಲದಕ್ಕೂ ಆರೋಗ್ಯವೇ ಅಡಿಪಾಯ ಅದಕ್ಕೆ ವಿಶೇಷ ಕಾಳಜಿ ನೀಡಬೇಕಾದುದು ಅತ್ಯಗತ್ಯ. ಧ್ಯಾನ, ವ್ಯಾಯಾಮ ರಹಿತ ಜೀವನ ಕ್ರಮದಿಂದ ಆನಾರೋಗ್ಯ ಪೀಡಿಸುತ್ತದೆ.”
-(ಡಾ. ವೈ ಬಿ ಪ್ರಭುದೇವ, ಆಯುರ್ವೇದ ಆಸ್ಪತ್ರೆ, ಮುರುಘಾಮಠ)

(ವರದಿ ಎಸ್ ಡಿ ಚಂದ್ರಶೇಖರ )

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು