ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆಯವರಿಂದ ಕನ್ನಡಿಗರಿಗೆ ಅನ್ಯಾಯ: ಕರವೇ ಪ್ರತಿಭಟನೆ

ವಿಜಯ ಸಂಘರ್ಷ

ಭದ್ರಾವತಿ: ಮಾಚೇನಹಳ್ಳಿಯ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಸಂಸ್ಥೆಯವರು ಕನ್ನಡಿಗರಿಗೆ ಟೆಂಡರ್ ಕೊಡದೆ ತಮಿಳು ಲಾರಿಚಾಲಕರಿಗೆ ಮಾತ್ರ ಟೆಂಡರ್ ಕೊಡುವ ಮೂಲಕ ಅನ್ಯಾಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ಗುರುವಾರ ಸಂಸ್ಥೆಯ ಕಚೇರಿ ಮುಂಭಾಗ ಧರಣಿ ನಡೆಸಿದರು.

ಕರ್ನಾಟಕದ ಲಾರಿ ಮಾಲೀಕರಿಗೆ ಹಾಗೂ ಚಾಲಕರಿಗೆ ಅನ್ಯಾಯ ವಾಗುತ್ತಿರುವುದನ್ನು. ಹಿಸಲಾಗದು. ನಮ್ಮ ನೆಲ,ಜಲ ಬಳಸಿ ಕೊಂಡ ಮೇಲೆ ನಮ್ಮವರಿಗೆ ಉದ್ಯೋಗಕೊಡುವ ಕೆಲಸವಾಗಬೇಕು. ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಶಿವಮೊಗ್ಗ ಜಿಲ್ಲೆಯಲ್ಲಿ ಪ್ಲಾಂಟ್ ನಡೆಸುವಾಗ

ಕನ್ನಡದವರಿಗೆ ಆದ್ಯತೆ ಕೊಡಬೇಕು.

ತಮಿಳುನಾಡಿನ ರಿಜಿಸ್ಟ್ರೇಷನ್ ಇರುವ ಲಾರಿಗಳಿಗೆ ಟೆಂಡರ್ ನೀಡುವ ಮೂಲಕ ಕರ್ನಾಟಕದ ಕನ್ನಡಿಗ ಚಾಲಕರಿಗೆ ಅನ್ಯಾಯ ವಾಗುತ್ತಿರುವುದನ್ನು ಸಹಿಸಲಾಗದು ಎಂದು ಆರೋಪಿಸಿದರು.

ಕರ್ನಾಟಕ ಸರ್ಕಾರದ ಕಾನೂನಿ ನನ್ವಯ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು.ಈ ಆದೇಶಕ್ಕೆ ಬೆಲೆ ಕೊಡಲೇಬೇಕು., ತಮಿಳುನಾಡು ನೊಂದಣಿಯ ವಾಹನಗಳಿಗೆ ಎಫ್‌ಸಿ,ಆರ್ ಸಿ, ಹೊಗೆ ತಪಾಸಣೆ ಸರ್ಟಿಫಿಕೆಟ್ ಸಹಿತ ಹಲವು ದಾಖಲೆಗಳು ಇರುವುದಿಲ್ಲ. ಆದರೂ ನಮ್ಮ ನೆಲದ ಕಾನೂನನ್ನು ತೂರಿ ರಾಜಾರೋಷವಾಗಿ ಸಂಚಾರ ಮಾಡುತ್ತಿದ್ದಾರೆ. ಆದ್ದರಿಂದ ನಮ್ಮ, ನೆಲ, ಭಾಷೆ, ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಬಲವಾಗಿ ಖಂಡಿಸುತ್ತದೆ ಎಂದರು.

ಇಂದು ಧರಣಿ ಮುಷ್ಕರವನ್ನು ಶಾಂತವಾಗಿ ಪ್ರಾರಂಭಿಸಲಾಗಿದೆ. ತಕ್ಷಣ ಜಿಲ್ಲಾಧಿಕಾರಿ,ಸಂಚಾರಿ ಪೊಲೀಸ್, ಆರ್ ಟಿಅಧಿಕಾರಿಗಳು, ತಹಶೀಲ್ದಾರ್ ಈಹೋರಾಟಕ್ಕೆ ಸ್ಪಂದಿಸಿ. ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ತಮಿಳುನಾಡಿನ ಲಾರಿಗಳ ದಾಖಲೆಗಳನ್ನು ಪರಿಶೀಲಿಸಲು ಸೂಚಿಸಬೇಕು. ದಾಖಲೆಗಳಿಲ್ಲದ ಲಾರಿ ಗಳನ್ನು ಸೀಜ್ ಮಾಡಿ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ರಾಜ್ಯಾಧ್ಯಕ್ಷ ನಾರಾಯಣಗೌಡರ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಕೂಡಲೇ ತಮಿಳುನಾಡಿನ ನೊಂದಣಿಯ ಲಾರಿಗಳನ್ನು ನಿಲ್ಲಿಸಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ಅವಕಾಶ ನೀಡಬೇಕು. ಅಲ್ಲಿಯವರೆಗೂ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದೆಂದರು.

ಸoದರ್ಭದಲ್ಲಿ ಮಹಿಳಾ ಪದಾಧಿಕಾರಿಗಳಾದ ಚೇತನಾ ಶೆಟ್ಟಿ,ನಾಗರತ್ನಾ, ಮಾಲಿನಿ, ಶಫಿಅಹಮದ್, ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಮಂಜುನಾಥ್ ಶೆಟ್ಟಿ ಸೇರಿದಂತೆ ಅನೇಕರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು