ದೇಶದ ಗಡಿ ಕಾಯುವ ಸೈನಿಕರಾದರೆ ರೈತರು ದೇಶದ ಬೆನ್ನೆಲುಬು : ಸಿದ್ದಬಸಪ್ಪ

ವಿಜಯ ಸಂಘರ್ಷ
ಭದ್ರಾವತಿ: ನಗರದ ಹೊಸಸೇತುವೆ ರಸ್ತೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತ ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆಯಲ್ಲಿ ರೈತ ದಿನಾಚರಣೆ ಆಚರಿಸಲಾಯಿತು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಸಿದ್ದಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಹಾಗೂ ದೇಶದ ಗಡಿ ಕಾಯುವ ಸೈನಿಕರು ದೇಶದ ಬೆನ್ನೆಲುಬು ಎಂದರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ ದೊಡ್ಡಗುಪ್ಪೆನ ಹಳ್ಳಿಯ ಜಮೀನ್ದಾರ ಟಿ.ಕೆ.ಗಂಗಪ್ಪ ಮಾತನಾಡಿ, ತಮ್ಮ ಬಾಲ್ಯ ವಿದ್ಯಾಭ್ಯಾಸ, ಕೃಷಿಕ ವೃತ್ತಿ, ತಮ್ಮ ಜೀವನದಲ್ಲಿ ಕೃಷಿಕ ವೃತ್ತಿಯಲ್ಲಿ ಎದುರಿಸಿದ ಸವಾಲುಗಳು ಹಾಗೂ ಸಾಧನೆಗಳ ಮಾಹಿತಿ ನೀಡಿದ ಇವರು ಹೈನುಗಾರಿಕೆ ಸಾವಯವ ಕೃಷಿ ಮಳೆ ಕೊಯ್ಲು ರಾಸಾಯನಿಕ ರಹಿತ ಸಾವಯವ ಗೊಬ್ಬರದ ಬಳಕೆ ಹಾಗೂ ಜಲಾಶಯಗಳ ನೀರಿನ ಉಪಯುಕ್ತ ಬಳಕೆಯ ಬಗ್ಗೆ ಹಲವಾರು ಉಪಯುಕ್ತ ಮಾಹಿತಿಗಳನ್ನು ಹಂಚಿಕೊಂಡರು.

ವಿದ್ಯಾ ಸಂಸ್ಥೆಯ ಬಿ.ಇ ಡಿ ಪ್ರಶಿಕ್ಷಣಾರ್ಥಿ ಸುರೇಶ ದಿನದ ವಿಶೇಷತೆಯನ್ನು ಕುರಿತಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿ.ಇಡಿ ವಿಭಾಗದ ದೈಹಿಕ ಶಿಕ್ಷಣದ ನಿರ್ದೇಶಕ ಶಿವಲಿಂಗೇಗೌಡ, ಎಲ್ಲಾ ವಿಭಾಗಗಳ ಮುಖ್ಯ ಶಿಕ್ಷಕರು, ಉಪನ್ಯಾಸಕರು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಶಿಕ್ಷಕಿ ಆಶಾ ಜೆ.ಆರ್. ಪ್ರಾರ್ಥಿಸಿ, ರುದ್ರಯ್ಯ ಸ್ವಾಗತಿಸಿದರೆ, ಎಂ.ಕವಿತಾ ವಂದಿಸಿ, ರೇಣುಕಪ್ಪ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು