ಅಶ್ವಥ್ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ- ಸಿಬ್ಬಂದಿಗಳ ಕರ್ತವ್ಯ ಅತ್ಯುತ್ತಮ: ಮಂಜುಳಾ ಸುಬ್ಬಣ್ಣ

ವಿಜಯ ಸಂಘರ್ಷ
ಭದ್ರಾವತಿ: ಅಶ್ವಥ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗಾಯಿತ್ರಿ ಮತ್ತು ಸಿಬ್ಬಂದಿಗಳು ಉತ್ತಮ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ನಗರಸಭಾ ಸದಸ್ಯೆ ಹಾಗೂ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷೆ ಕೆ.ಎಂ.ಮಂಜುಳಾ ಸುಬ್ಬಣ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಲ್ಲಿನ ವೈದ್ಯರ ಮತ್ತು ಸಿಬ್ಬಂದಿಗಳ ವಿರುದ್ಧ ಜೆಡಿಯು ಮುಖಂಡರ ಆರೋಪ‌ಕ್ಕೆ ತಿರುಗೇಟು ನೀಡಿದ ಸಮಿತಿ ಅಧ್ಯಕ್ಷರು ಆರೋಗ್ಯ ಕೇಂದ್ರದ ಬಗ್ಗೆ ರಕ್ಷಾ ಸಮಿತಿ ಸಭೆ ನಡೆಸಿ ಚರ್ಚಿಸಲಾಗಿತ್ತು, ಡಾ.ಗಾಯತ್ರಿ ಹಾಗೂ ಸಿಬ್ಬಂದಿಗಳ ವಿರುದ್ಧ ಜೆಡಿಯು ಮುಖಂಡರು ಶಿವಮೊಗ್ಗದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುವ ವಿಚಾರ ಸತ್ಯಕ್ಕೆ ದೂರವಾದದ್ದು ಎಂದು ಸಭೆಯಲ್ಲಿ ತೀರ್ಮಾನಿಸಿರುವುದಾಗಿ ಹೇಳಿದ್ದಾರೆ.

ಅಶ್ವತ್ಥನಗರದ ಆರೋಗ್ಯ ಕೇಂದ್ರದ ಸ್ಥಿತಿಗತಿ, ಡಾ.ಗಾಯತ್ರಿ ಹಾಗೂ ಸಿಬ್ಬಂದಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಹೇಗಿತ್ತು ಎಂಬುದು ಸ್ಥಳೀಯರಿಗೆ ಹಾಗೂ ರಕ್ಷಾ ಸಮಿತಿಗೆ ತಿಳಿದಿದೆ. ವೈದ್ಯರು ಆಸ್ಪತ್ರೆಯ ಜವಾಬ್ದಾರಿ ವಹಿಸಿಕೊಂಡ ನಂತರ ಅಸ್ಪತ್ರೆಯನ್ನು ಸರ್ವತೋಮುಖ ಅಭಿವೃದ್ಧಿ ಪಥದತ್ತ ಕೊಂಡೊಯಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಗರ್ಭಿಣಿಯರು ಸೇರಿದಂತೆ ಪ್ರತಿದಿನದ OPD ಒಳಹರಿವು ಸುಮಾರು ಶೇ: 80 ಕ್ಕಿಂತ ಹೆಚ್ಚು ರೋಗಿಗಳು ಇರುತ್ತವೆ, ಹೀಗಾಗಿ ವರ್ಷಕ್ಕೆ 12,000 ಕ್ಕಿಂತ ಹೆಚ್ಚು ರೋಗಿಗಳು ಹಾಜರಾಗುತ್ತಾರೆ. ಇವೆಲ್ಲವೂ ಡಾ.ಗಾಯತ್ರಿ ಆಸ್ಪತ್ರೆ ಸಿಬ್ಬಂದಿಗಳು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳದೆ ಇದು ಸಂಭವಿಸಲು ಸಾಧ್ಯವಾ? ಎಂದು ಪ್ರಶ್ನಿಸಿದ್ದಾರೆ.

ಆಸ್ಪತ್ರೆಯ ಸಿಬ್ಬಂದಿಗಳ ಕಠಿಣ ಪರಿಶ್ರಮ ದಿಂದ ಉತ್ತಮ ನಿರ್ವಹಣೆ ಮಾಡಲಾಗಿದೆ. ಅಶ್ವಥ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವು ರಾಷ್ಟ್ರೀಯ ಗುಣಮಟ್ಟದ (NQAS) ಆಯ್ಕೆಗೆ ಕಾರಣವಾಗಿದೆ. ಮತ್ತು ಅಗ್ರ 3 ಅಖಿಲ ಭಾರತ ಮಟ್ಟದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಅನುಕೂಲವಾಗುವಂತೆ ಫಿಜಿಷಿಯನ್, ಮೂಳೆ. ಮಕ್ಕಳ, ಚರ್ಮ, ಮಾನಸಿಕ ಮತ್ತು ಸ್ತ್ರೀರೋಗತಜ್ಞರಂತಹ ತಜ್ಞರ ಸಮಾಲೋಚನೆ ಯನ್ನು ಪಡೆಯುವಲ್ಲಿ ಡಾ.ಗಾಯತ್ರಿ ರವರ ಶ್ರಮ ಅಪಾರವಾಗಿದೆ ಎಂದು ಸಮಿತಿಯು ನಿಲುವು ತಾಳಿದೆ.‌

ಸ್ಥಳೀಯ ಸಾರ್ವಜನಿಕರು ತೃಪ್ತರಾಗಿದ್ದಾರೆ ಮತ್ತು ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ನಿಸ್ವಾರ್ಥ ಸೇವೆಗಾಗಿ ಅರೋಗ್ಯ ರಕ್ಷಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಶ್ಲಾಘಿಸುತ್ತಾರೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು