ವಿಜಯ ಸಂಘರ್ಷ
ಸಾಗರ: ಗ್ರಾಮಾಂತರ ಠಾಣೆಯಲ್ಲಿ ಮಹಿಳಾ ಸಿಬ್ಬಂದಿಗೆ ಸೀಮಂತ ಕಾರ್ಯ ಮಾಡುವ ಮೂಲಕ ಬಾವುಕತೆಗೆ ಪೊಲೀಸ್ ಸ್ಟೇಷನ್ ಸಾಕ್ಷಿಯಾಯಿತು.
ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯಾ ಎಂಬ ಮಹಿಳಾ ಸಿಬ್ಬಂದಿಗೆ ಠಾಣೆಯ ಹಿರಿಯ ಅಧಿಕಾರಿಗಳು ಹಾಗೂ ಸಹ ಸಿಬ್ಬಂದಿಗಳು ಸೀಮಂತ ಕಾರ್ಯ ಮಾಡುವ ಮೂಲಕ ಇದೀಗ ಪ್ರೀತಿಯ ಸಂದೇಶವನ್ನು ಸಾರಿದ್ದಾರೆ.
ಸೀಮಂತ ಕಾರ್ಯ ಆಚರಿಸಿಕೊಂಡ ಮಹಿಳಾ ಪೊಲೀಸ್ ಸಿಬ್ಬಂದಿ ಠಾಣೆಯ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.