ವಿಜಯ ಸಂಘರ್ಷ
ಭದ್ರಾವತಿ: ಶ್ರೀಮಂತಿಕೆ ಇದ್ದರಷ್ಟೇ ಸಾಲದು ಅದನ್ನು ಸೇವಾಕಾರ್ಯಗಳಿಗೆ ಬಳಸಿದಾಗ ಮಾತ್ರ ಆ ಶ್ರೀಮಂತಿಕೆ ಸಾರ್ಥಕತೆ ಪಡೆಯುತ್ತದೆ ಎಂದು ನಗರಸಭಾ ಸದಸ್ಯ ಬಿ.ಕೆ.ಮೋಹನ್ ಹೇಳಿದರು.
ಅವರು ಶನಿವಾರ ಸಿದ್ಧಾರೂಢನಗರದ ಬಸವೇಶ್ವರ ಸಭಾಭವನದಲ್ಲಿ ಬಸವೇಶ್ವರ ಧರ್ಮ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಶಾಲಾಮಕ್ಕಳಿಗೆ ಹಾಗೂ ಬಡಕಾರ್ಮಿಕರಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.
ಭದ್ರಾವತಿ ಕ್ಷೇತ್ರದಲ್ಲಿ ಸಾಕಷ್ಟುಸಿರಿವಂತರಿ ದ್ದಾರೆ ಆದರೆ ಅಗತ್ಯವಿರುವವರಿಗೆ ದಾನಮಾಡಬೇಕೆಂಬುವವರ ಸಂಖ್ಯೆ ಮಾತ್ರ ಬಹಳ ಕಡಿಮೆಯಿದೆ. ಬಡತನದಲ್ಲಿ ಹುಟ್ಟಿದರೂ ಸಹ ಶ್ರಮವಹಿಸಿ ಜೀವನದಲ್ಲಿ ಹಣವಂತರಾಗಿ ಬೆಳೆಯುವುದು ತಪ್ಪಲ್ಲ ಆದರೆ ಆರೀತಿ ಗಳಿಸಿದ ಸಂಪತ್ತಿನಿಂದ ಬಡವರಿಗೆ, ಆರ್ಥಿಕವಾಗಿ ದುಸ್ಥಿತಿಯಲ್ಲಿರು ವವರಿಗೆ ಅಗತ್ಯವಾದ ನೆರವನ್ನುನೀಡುವ ಮನೋಭಾವ ಬೆಳಸಿಕೊಳ್ಳಬೇಕು. ದೇವರು ನಮಗೆ ಸರಿವಂತಿಕೆಯನ್ನು ನೀಡಿ ಪರೀಕ್ಷಿಸುತ್ತಾನೆ, ಆ ಪರೀಕ್ಷೆಯಲ್ಲಿ ಉತ್ತೀರ್ಣ ರಾಗಲು ಇರುವ ಮಾರ್ಗವೆಂದರೆ ಜೀವನದಲ್ಲಿ ದಾನ-ಧರ್ಮಕಾರ್ಯಗಳನ್ನು ಮಾಡುವುದೊಂದೇ ಮಾರ್ಗ ಎಂದರು.
ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಮಾತನಾಡಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಸಂಘ,ಸoಸ್ಥೆಗಳ ಸಹಕಾರ ಅತ್ಯಗತ್ಯ ಎಂದರು.
ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಟ್ರಸ್ಟಿ ಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾಗದನಗರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಿ.ಬಸವರಾಜ್, ಜ್ಞಾನೆಶ್ವರಿ ವಿದ್ಯಾವರ್ದಕ ಶಾಲೆಯ ಬಸವರಾಜ್, ಸಾಹಿತಿ ಬಸವರಾಜಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಂದಿನಿ ಮಲ್ಲಿಕಾಜುನ ಪ್ರಾರ್ಥಿಸಿದರು. ಮಂಜುನಾಥ್ ಸ್ವಾಗತಿಸಿದರು. ಅಣ್ಣಪ್ಪ ನಿರೂಪಿಸಿ, ವಂದಿಸಿದರು.