ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಾಲು ಉತ್ಪಾದಕರಿಂದ ಶಿಮುಲ್ ವಿರುದ್ದ ಪ್ರತಿಭಟನೆ

ವಿಜಯ ಸಂಘರ್ಷ
ಭದ್ರಾವತಿ: ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ತಾಲೂಕು ಶಾಖೆಯ ಹಾಲು ಉತ್ಪಾದಕರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜ: 9 ರಂದು ಮಾಚೇನಹಳ್ಳಿಯಲ್ಲಿರುವ ಶಿಮುಲ್ ಮುಂಭಾಗದಲ್ಲಿ ಆಡಳಿತ ಮಂಡಳಿ ವಿರುದ್ದ ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ತಾರಾ ಭೀಮರಾವ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಘೋಷ್ಠಿ ಯಲ್ಲಿ ಮಾಹಿತಿನೀಡಿಮಾಡಿದರು. ದೇಶದಲ್ಲಿ ಶೇ: 50 ರಷ್ಟು ಮಂದಿ ಕೃಷಿಯಿಂದ ಉದ್ಯೋಗ ಸೃಷ್ಟಿಸಿಕೊಂಡಿದ್ದಾರೆ. ದೇಶದ ಬೆನ್ನೆಲುಬು ಎಂದು ಕರೆಸಿಕೊಳ್ಳುವ ರೈತರು ಬರಗಾಲದಿಂದ ಚಿಂತಾಜನಕ ಸ್ಥಿತಿ ಎದುರಿಸುತ್ತಿದ್ದಾರೆ. ಬೆಳೆದ ಬೆಳೆಯನ್ನು ಕಳೆದುಕೊಂಡಿದ್ದಾರೆ. ನೀರಿಗೆ ಹಾಹಾಕಾರ ಎದುರಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ನೀಡಬೇಕಾದ ಹಾಲು ಒಕ್ಕೂಟ ಶಿಮುಲ್ ರೈತರಿಗೆ ಭಾರೀ ಅನ್ಯಾಯವೆಸಗಿದೆ.

 ಚಳಿಗಾಲವಾದ್ದರಿಂದ ಹಾಗೂ ರಾಸು ತಳಿಗಳ ಸಮಸ್ಯೆಗಳಿಂದಾಗಿ ಹಾಲು ಇಳುವರಿ ಕಡಿಮೆ ಇದೆ. 1 ಲೀಟರ್ ಹಾಲಿನ ಉತ್ಪತ್ತಿಗೆ 52.20 ರೂ ವೆಚ್ಚವಾಗುತ್ತಿದೆ. ಆದರೆ ಶಿಮುಲ್ ಕೇವಲ 29.75 ಪೈಸೆ ನೀಡುತ್ತಿದೆ. ಭೂಸಾ ಬೆಲೆ 51 ರೂ ಹೆಚ್ಚಿಸಿದ್ದಾರೆ. ಬೆಂಬಲ ಬೆಲೆ 5 ರೂ ಬದಲಾಗಿ 3 ರೂ ನೀಡುತ್ತಿದ್ದ ಹಣವನ್ನು ನಿಲ್ಲಿಸಿದ್ದಾರೆ. ಆದರೆ ಕುಡಿಯುವ ನೀರಿನ ಬಾಟ್ಲಿಗೆ 30/-ರೂ ಬೆಲೆ ಇಂದಿನ ದಿನದಲ್ಲಿ ರೈತರಿಗೆ ನ್ಯಾಯ ಒದಗಿಸಬೇಕಾದ ಶಿಮುಲ್ ತನ್ನ ದುಂದು ವೆಚ್ಚಗಳನ್ನು ಕಡಿತ ಮಾಡಿ ಹಾಲು ಉತ್ಪಾದಕರಿಗೆ ನ್ಯಾಯ ಬದ್ದ ಹಣ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾರಾ ಭೀಮರಾವ್ ಹೇಳಿದರು.

ಕಿಸಾನ್ ಸಂಘದ ಜಿಲ್ಲಾ ಉಪಾಧ್ಯಕ್ಷ ತಿಮ್ಲಾಪುರದ ಹಾಲಸ್ವಾಮಿ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಕುಟುಂಬದಿoದ ಬಂದವರಾಗಿದ್ದರೂ ರೈತರ ಹಿತ ಕಾಯುವಲ್ಲಿ ವಿಫಲರಾಗಿ ರೈತ ವಿರೋಧಿ ಸರಕಾರವಾಗಿದೆ. ಹಾಲಿನ ಬೆಲೆ ಕಡಿತ ಮಾಡಿ ಭೂಸಾ ಬೆಲೆ ಹೆಚ್ಚಿಸಿರುವುದು ಖಂಡನೀಯ. ಆದರೆ ಶಿಮುಲ್ ತನ್ನ ಉತ್ಪಾದನೆ ವಸ್ತುಗಳ ಬೆಲೆಯನ್ನು ಮಾತ್ರ ಕಡಿಮೆ ಮಾಡದೆ ಹೆಚ್ಚಿಸುತ್ತಲೆ ಇದೆ.ಆದ್ದರಿಂದ ಶಿಮುಲ್ ಹಿಂದಿದ್ದ0ತೆ 51 ರೂ ಭೂಸಾ ದರ ಕಡಿಮೆ ಮಾಡಬೇಕು. 3.75 ಪೈಸೆ ಹಾಲಿನ ದರ ಹೆಚ್ಚಿಸಬೇಕು. ಪ್ರೋತ್ಸಾಹ ಧನ 5/- ರೂ ನೀಡಬೇಕೆಂದು ಒತ್ತಾಯಿಸುತ್ತೇವೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ ಭಾರತೀಯ ಕಿಸಾನ್ ಸಂಘ ಗುಜರಾತಿನಲ್ಲಿ ಹೋರಾಟ ನಡೆಸಿದಂತೆ ಇಲ್ಲೂ ಹೋರಾಟ ನಡೆಸಲಾಗುವುದೆಂದು ಹೇಳಿದರು.

ಪತ್ರಿಕಾ ಗೋಷ್ಟಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಸತೀಶ್, ಪದಾಧಿಕಾರಿಗಳಾದ ಬಾಬಳ್ಳಿ ಆನಂದಗಿರಿ, ಯರೇಹಳ್ಳಿ ಹರೀಶ್, ಮಲ್ಲಾಪುರ ಮಲ್ಲೇಶ್ ಮುಂತಾದವರಿದ್ದರು.  

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು