ವಿಜಯ ಸಂಘರ್ಷ
ಶಿಕಾರಿಪುರ: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಪ್ರಕರಣ ಗಳಿಗೆ ಸಂಬಂಧಿಸಿದಂತೆ ಕರ್ತವ್ಯ ನಿಷ್ಠೆ ಹಾಗೂ ಕಾನೂನು ಸುವ್ಯವಸ್ಥೆ ತೋರಿದ ಪೋಲಿಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಶಿಕಾರಿಪುರ ಗ್ರಾಮಾಂತರ ಹಾಗೂ ಟೌನ್ ಪೊಲೀಸ್ ಠಾಣೆಗಳಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಡಿವೈಎಸ್ ಪಿ ಶಿವಾನಂದ ಮದರ ಖಂಡಿ, ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ತನಿಖಾಧಿಕಾರಿ ಮಹಾಂತೇಶ್, ಟೌನ್ ಪೋಲಿಸ್ ಠಾಣೆಯ ಸಹಾಯಕ ತನಿಖಾಧಿಕಾರಿ ಚಂದ್ರಪ್ಪ ಎಚ್ ಸಿ ರವರು ಶಿಕಾರಿಪುರದಿಂದ ಬಾಜನರಾಗಿದ್ದಾರೆ.
2021 ನೇ ಸಾಲಿನಲ್ಲಿ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಎಸ್ ಸಿ,ಎಸ್ ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸಿದ್ದ ಡಿವೈಎಸ್ ಪಿ ಶಿವಾನಂದ ಮದರ ಖಂಡಿ, ಹಾಗೂ ಸಹಾಯಕ ತನಿಖಾಧಿಕಾರಿ ಆಗಿದ್ದ ಮಹಾಂತೇಶ್ ಎಂ ಎಚ್ ಸಿ, ಮತ್ತು ಇದೇ 2021 ನೇ ಸಾಲಿನಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಾಯಕ ತನಿಖಾಧಿಕಾರಿಯಾಗಿದ್ದ ಚಂದ್ರಪ್ಪ ಎಚ್ ಸಿ ರವರಿಗೆ ಈ ಗೌರವ ಲಭಿಸಿದೆ.
ಉಳಿದಂತೆ 2016 ನೇ ಸಾಲಿನಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಹಾಯಕ ತನಿಖಾಧಿಕಾರಿ ಎಎಸ್ಐ ಕರಿಬಸಪ್ಪ, 2017 ನೇ ಸಾಲಿನ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ ಕೊಲೆ ಪ್ರಕರಣದ ಸಹಾಯಕ ತನಿಖಾಧಿಕಾರಿ ಕಲಂದರ್, 2019ನೇ ಸಾಲಿನ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ಎರಡು ಡಕಾಯಿತಿ ಪ್ರಕರಣಗಳ ತನಿಕಾ ಅಧಿಕಾರಿ ದಿವಾಕರ ಎ ಎಸ್ ಐ, 2020 ನೇ ಸಾಲಿನ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪೋಕ್ಸೋ ಕಾಯ್ದೆ ಪ್ರಕಾರದ ಸಹಾಯಕ ತಧಿಕಾಧಿಕಾರಿ ಶ್ರೀ ಮೋಹನ್ ಎಚ್ ಸಿ, ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆಯ ಪೋಕ್ಸೋ ಕಾಯ್ದೆ ಪ್ರಕಾರದ ತನಿಖಾಧಿಕಾರಿಗಳಾಗಿದ್ದ ಸುರೇಶ್ ಎಚ್, ಸಿ, ಮತ್ತು 2020 ನೇ ಸಾಲಿನ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ತನಿಕಾಧಿಕಾರಿಗಳಾಗಿದ್ದ ಅಣ್ಣಪ್ಪ ಎಚ್ ಸಿ ರವರಿಗೂ ಕೂಡ ಈ ಗೌರವ ಲಭ್ಯವಾಗಿದೆ.
ಪ್ರಕರಣಗಳಲ್ಲಿ ಆರೋಪಿತರಾಗಿದ್ದ ಆರೋಪಿತರಿಗೆ ಮಾನ್ಯ ಘನ ನ್ಯಾಯಾಲಯದಲ್ಲಿ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿ ಉತ್ತಮ ಕರ್ತವ್ಯ ನಿಷ್ಠೆ ತೋರಿದ ಅಧಿಕಾರಿಗಳಿಗೆ ಎಸ್ ಪಿ ಮಿಥುನ್ ಕುಮಾರ್ ರವರ ಕಚೇರಿಯಲ್ಲಿ ಪ್ರಶಂಸನಾ ಪತ್ರ ನೀಡಿ ಇನ್ನೂ ಹೆಚ್ಚಿನ ಉತ್ತಮ ಕರ್ತವ್ಯ ನಿರ್ವಹಿಸುವಂತೆ ಅಭಿನಂದಿಸಿ ಗೌರವಿಸಿದರು.