ಚುಂಚಾದ್ರಿ ಮಹಿಳಾ ವೇದಿಕೆಯಿಂದ ಮಕರ ಸಂಕ್ರಾಂತಿ ಆಚರಣೆ

ವಿಜಯ ಸಂಘರ್ಷ

ಭದ್ರಾವತಿ: ನಗರದ ಚುಂಚಾದ್ರಿ ಮಹಿಳಾ ವೇದಿಕೆಯಿಂದ ಮಕರ ಸಂಕ್ರಾಂತಿ ಸುಗ್ಗಿ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು. ಸಂಕ್ರಾಂತಿಯ ವಿಶೇಷವಾಗಿ ಎಳ್ಳು ಬೆಲ್ಲ ಪೊಂಗಲ್ ಗೆಣಸು ಮತ್ತು ಅವರೆಕಾಯಿ ಯನ್ನು ಬೇಯಿಸುವ ಚಿಕ್ಕ ಮಕ್ಕಳಿಗೆ ಎಳ್ಳನ್ನು ನೀಡಿ, ಹಳ್ಳಿಯ ಸೊಗಡಿನ ರೀತಿ ಆಚರಿಸಲಾಯಿತು.

ವೇದಿಕೆ ಗೌರವಾಧ್ಯಕ್ಷೆ ಡಾ.ಅನುರಾಧ ಪಾಟೀಲ್ ಮಾತನಾಡಿ, ವರ್ಷದ ಮೊದಲನೇ ಹಬ್ಬ ಸಂಕ್ರಾಂತಿ ರೈತರು ಬೆಳೆದಂತಹ ಫಸಲನ್ನು ರಾಶಿ ಪೂಜೆಯನ್ನು ಮಾಡುವುದು ಎಳ್ಳು ಬೆಲ್ಲ ಹಂಚಿ, ಒಳ್ಳೆಯದನ್ನು ಮಾತಾಡುವುದು ಸಂಜೆ ಕಿಚ್ಚನ್ನು ಐಸೋ ಮುಖಾಂತರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದರು.

ವೇದಿಕೆ ಅಧ್ಯಕ್ಷೆ ಎಂ.ಎಸ್. ಸುಧಾಮಣಿ ಮಾತನಾಡಿ ಎಳ್ಳು ಬೆಲ್ಲ ಕಷ್ಟ ಸುಖವನ್ನು ಸಂಕೇತ ಸರಿಸಾಮಾನವಾಗಿ ಇರುತ್ತದೆ ಅದನ್ನು ಒಳ್ಳೆಯದನ್ನ ಸಮಾಜಕ್ಕೆ ಹಂಚಬೇಕು ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು