ವಿಜಯ ಸಂಘರ್ಷ
ಭದ್ರಾವತಿ: ನಾನು ರಾಮಭಕ್ತ ತಾಕತ್ ಇದ್ದರೆ ಬಂಧಿಸಿ ಎಂಬ ಶೀರ್ಷಿಕೆ ಅಡಿ ಯಲ್ಲಿ ನಗರದ ಮಾಧವಚಾರ್ ವೃತ್ತದಲ್ಲಿ ವಿವಿಧ ಹಿಂದೂ ಸಂಘಟನೆಗಳು ಶುಕ್ರವಾರ ಸಂಜೆ ಪ್ರತಿಭಟನೆಗೆ ಮುಂದಾಗಿದೆ.
ಈ ಸಂದರ್ಭದಲ್ಲಿ ಪ್ರತಿಭಟನೆಯನ್ನು ದ್ದೇಶಿಸಿ ಮಾತನಾಡಿ, ಕರಸೇವಕರನ್ನು ಬಂಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾ ಕಾರರು ರಾಮನ ಸಂತತಿ ನಾವೆಲ್ಲ, ಟಿಪ್ಪು ಸಂಸ್ಕೃತಿ ಬೇಕಿಲ್ಲ ಎಂಬ ಘೋಷಣೆ ಕೂಗಿ, ಶ್ರೀ ರಾಮ ವಿರೋಧಿ ಹಾಗೂ ಹಿಂದೂ ವಿರೋಧಿ ಸರ್ಕಾರ ಎಂದು ದೂರಿದರು.
ರಾಮ ಭಕ್ತರನ್ನ ಬೆದರಿಸುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಪೊಲೀಸರ ಮೂಲಕ ರಾಮಭಕ್ತರನ್ನ ಹೆದರಿಸಲಾಗುತ್ತಿದೆ. ಪಕ್ಷದ ಮುಖಂಡ
ಬಿ.ಕೆ.ಹರಿಪ್ರಸಾದ್ ಕರ್ನಾಟಕ ಗೋದ್ರಾ ಆಗುವ ಶಂಕೆಯನ್ನ ಹೊರಹಾಕಿದ್ದಾರೆ. ಗೋದ್ರಾ ಮಾಡುವ ಹುನ್ನಾರ ಯಾರದ್ದು? ಎಂದು ಪ್ರಶ್ನಿಸಿದರು.
ಅಲ್ಪಸಂಖ್ಯಾತರ ತುಷ್ಟಿ ಕರಣ ಮಾಡುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ವಿನಾಕಾರಣ ಕಾರ್ಯಕರ್ತರ ಮೇಲೆ ಕೇಸುಗಳನ್ನು ದಾಖಲಿಸುತ್ತದೆ. ಇದರಿಂದ ಹೆದರಿ ಹಿಂದೆ ಸರಿಯುವವರು ನಾವಲ್ಲ. ಹಿಂದುಗಳನ್ನು ಕೆಣಕಬೇಡಿ ರಾಮಭಕ್ತರನ್ನು ಕೆಣಕಬೇಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು. ನಂತರ ಮೆರವಣಿಗೆಯಲ್ಲಿ ರಂಗಪ್ಪ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿದರು.
ಪ್ರಮುಖರಾದ ಧರ್ಮಪ್ರಸಾದ್,
ಹಾ.ರಾಮಪ್ಪ, ಕೆ.ಎನ್.ಶ್ರೀಹರ್ಷ, ರಾಮಲಿಂಗಯ್ಯ, ವಿ.ಕದಿರೇಶ್, ಬಿ.ಕೆ.ಶ್ರೀನಾಥ್, ಸುರೇಶ್, ವೇಲು, ಧನುಷ್, ವಿಶ್ವನಾಥರಾವ್, ಹೇಮಾವತಿ ವಿಶ್ವನಾಥ್, ಪ್ರಭಾಕರ್, ಕೃಷ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.