ಆಯುರ್ವೇದ ಗಿಡಮೂಲಿಕೆ -ಧನ್ವಂತರಿ ಉಚಿತ ಚಿಕಿತ್ಸೆ ನಾಳೆ

ವಿಜಯ ಸಂಘರ್ಷ
ಶಿಕಾರಿಪುರ: ಮಂಡಿ ನೋವು, ದೀರ್ಘ ದಮ್ಮು ಕಾಯಿಲೆ ಇರುವವರಿಗೆ ಆಯುರ್ವೇದ ಗಿಡಮೂಲಿಕೆ ಹಾಗೂ ಧನ್ವಂತರಿ ಚಿಕಿತ್ಸೆ ಗಳಿಂದ ಪ್ರಕೃತಿ ಚಿಕಿತ್ಸಾಲಯ, ಪಂಚಮಸಾಲಿ ಸಮಾಜದ ಸಹಯೋಗದಲ್ಲಿ ಐಶ್ವರ್ಯ ಹೋಮಿಯೋ ಫಾರ್ಮಸಿ ಸಂಯುಕ್ತ ಆಶ್ರಯದಲ್ಲಿ ಉಚಿತ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು
ಡಾ:ಮಾಲತೇಶ್ ತಿಳಿಸಿದ್ದಾರೆ.

ತಾಲೂಕಿನ ಕೆಂಗಟ್ಟಿ ಗ್ರಾಮದಲ್ಲಿ ಔಷಧಿ ವನದಲ್ಲಿ ಭಾನುವಾರ ಬೆಳಿಗ್ಗೆ 9 ಕ್ಕೆ ಧನ್ವಂತರಿ ಹೋಮ ಧೀರ್ಘತಮ್ಮ ಇದ್ದು, ಮಂಡಿ ನೋವು ನಿಂದ ಬಳಲುವವರಿಗೆ ಬೆಳಿಗ್ಗೆ 10 ಗಂಟೆ ಯಿಂದ 10:30ರವರೆಗೂ ವಿಶೇಷ ಗಿಡಮೂಲಿಕೆಗಳಿಂದ ತಯಾರಾದ ನೋವು ನಿವಾರಕ ಔಷಧಿ ನೀಡುತ್ತಿದ್ದು, 1:30ರಿಂದ ಮಧ್ಯಾಹ್ನ 2.30ರವರೆಗೆ ಎಲೆಕ್ಟ್ರೋಥೆರಫಿ, ಫಿಜಿಯೋಥೆರಪಿ ಮೂಲಕ ಮಧ್ಯಾಹ್ನ 2:30ಕ್ಕೆ ಅಗ್ನಿಕರ್ಮ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಉಚಿತ ಚಿಕಿತ್ಸಾ ಶಿಬಿರದಲ್ಲಿ
ಡಾ:ನಾಗವೀಣಾ, ಎಂ ಪಾಟೀಲ್ ಬಿ ಎಚ್ ಎಮ್ ಎಸ್, ಡಾ: ಮಹೇಂದ್ರ ಡಿಪಿಟಿ, ಡಿ ಎನ್ ವೈ ಎಸ್, ಡಾ:ರಾಜೇಂದ್ರ ಸ್ವಾಮಿ ಬಿ ಎನ್ ವೈ ಎಸ್ ರವರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಿದ್ದಾರೆ.

ಚಿಕಿತ್ಸೆ ಪಡೆಯಲಿಕ್ಕಿಸುವವರು ಮುಂಚಿತವಾಗಿ ಹೆಸರು ನೊಂದಾಯಿಸುವ ಮೂಲಕ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು