ವಿಜಯ ಸಂಘರ್ಷ
ಭದ್ರಾವತಿ: ಪೊಲೀಸ್ ಇಲಾಖೆ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸು ತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಮುಖಂಡರು
ಡಿವೈಎಸ್ ಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಜಮೀನಿನ ಬೇಲಿ ವಿಷಯಕ್ಕೆ ಸಂಬಂಧಿಸಿ ದಂತೆ ವೀರಾಪುರ ಗ್ರಾಮದ ನಿವಾಸಿ ಸುನಿಲ್(30) ಎಂಬಾತ ಮೇಲೆ 10 ಜನರ ತಂಡ ಹಲ್ಲೆ ನಡೆಸಿ, ಜಾತಿನಿಂದನೆ ಮಾಡಿದೆ. ಹಲ್ಲೆ ಮಾಡಿರುವವರ ಪರವಾಗಿ ಶಾಸಕರ ಪುತ್ರರಾದ ಬಿ.ಎಸ್ ಬಸವೇಶ್, ಬಿ.ಎಸ್ ಗಣೇಶ್ ಹಾಗು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಕುಮಾರ್ ಬೆಂಬಲನೀಡಿದ್ದು ಹಲ್ಲೆಗೊಳಗಾದ ವ್ಯಕ್ತಿಗೆ ಪ್ರಾಣ ಬೆದರಿಕೆ ಯೊಡ್ಡಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಆಡಳಿತ ಏಕಪಕ್ಷೀಯವಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಬಾಲಕೃಷ್ಣ, ಟಿ.ಚಂದ್ರೇಗೌಡ,ಅಜಿತ್,
ಎಸ್.ಕೆ.ಉಮೇಶ್, ವೆಂಕಟೇಶ್, ಸುರೇಶ್, ಎ.ಟಿ.ರವಿ, ಆನಂದ, ಕರೀಗೌಡ, ಚಂದ್ರು, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.