ವಿಜಯ ಸಂಘರ್ಷ
ಶಿವಮೊಗ್ಗ: ಹಲ್ಲುಗಳ ಸಂರಕ್ಷಣೆ ಬಗ್ಗೆ ಕಾಳಜಿ ಅಗತ್ಯ, ಮುಖದ ಸೌಂದರ್ಯ ಹೆಚ್ಚಿಸಲು ಹಲ್ಲುಗಳು ಪ್ರಮುಖ ಕಾರಣ. ಬಾಲ್ಯದಲ್ಲಿ ಹಲ್ಲುಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಶರಾವತಿ ದಂತ ವೈದ್ಯಕೀಯ ಕಾಲೇಜಿನ ದಂತವಿಭಾಗದ ಮುಖ್ಯಸ್ಥೆ ಡಾ ಜೀನತ್ ಅಂಬರೀನ್ ಹೇಳಿದರು.
ಇನ್ನರ್‌ವ್ಹೀಲ್ ಪೂರ್ವ ವತಿಯಿಂದ ಇಂಟರಾಕ್ಟ್ ಮಕ್ಕಳಿಗೆ, ಸಾರ್ವಜನಿಕರು, ಶಿಕ್ಷಕರಿಗೆ ಆಯೋಜಿಸಿದ್ದ ದಂತ ತಪಾಸಣಾ ಉಚಿತ ಶಿಬಿರ ಹಾಗೂ ದಂತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನು ಹಲ್ಲುಗಳ ಸ್ವಚ್ಛತೆ ಬಗ್ಗೆ ಪ್ರತಿ ನಿತ್ಯ ಪ್ರಾಮುಖ್ಯತೆ ನೀಡಬೇಕು. ಹಲ್ಲುಗಳ ಸಮಸ್ಯೆ ಕಂಡುಬAದಲ್ಲಿ ಕೂಡಲೇ ವೈದ್ಯರಿಂದ ಮಾರ್ಗದರ್ಶನ ಪಡೆಯಬೇಕು. ಅತಿಯಾದ ಚಾಕಲೇಟ್ ಸೇವನೆ ಒಳ್ಳೆಯದಲ್ಲ ಎಂದು ತಿಳಿಸಿದರು.
ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಶ್ವೇತಾ ಆಶಿತ್ ಮಾತನಾಡಿ, ಮಕ್ಕಳು ವಿದ್ಯಾಭ್ಯಾಸದ ಜತೆಯಲ್ಲಿ ಆರೋಗ್ಯ ಸದೃಢವಾಗಿಟ್ಟುಕೊಳ್ಳುವ ಬಗ್ಗೆಯೂ ಜಾಗೃತಿ ಹೊಂದಬೇಕು. ಹಲ್ಲುಗಳ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರಯ್ಯ ಮಾತನಾಡಿ, ಮಕ್ಕಳಿಗೆ ಹಲ್ಲುಗಳ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದು ಒಳ್ಳೆಯದು. ಬಾಲ್ಯದಲ್ಲಿಯೇ ಆರೋಗ್ಯ ಜಾಗೃತಿ ಹೊಂದಿದಲ್ಲಿ ಮಕ್ಕಳ ಬೆಳವಣಿಗೆ ಚೆನ್ನಾಗಿರುತ್ತದೆ. ಇಂತಹ ತಪಾಸಣಾ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಅನಿಸಿಕೆ ವ್ಯಕ್ತಪಡಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ , ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಟ್ರಸ್ಟ್ ಉಪಾಧ್ಯಕ್ಷ ಡಾ. ಪರಮೇಶ್ವರ ಶಿಗ್ಗಾವ್, ನಾಗವೇಣಿ.ಎಸ್.ಆರ್., ಶರಾವತಿ ದಂತ ವೈದ್ಯಕೀಯ ಕಾಲೇಜಿನ ಡಾ. ಮೇಘಶ್ಯಾಂ ಭಟ್, ಡಾ. ಅಲ್ವಿನ್ ಅಂತೋಣಿ, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ವೀಣಾ ಸುರೇಶ್, ಇಂಟರಾಕ್ಟ್ ಕ್ಲಬ್ ಅಧ್ಯಕ್ಷರು, ಕಾರ್ಯದರ್ಶಿ, ಪ್ರಾಚಾರ್ಯರು, ಶಿಕ್ಷಕರು ಉಪಸ್ಥಿತರಿದ್ದರು.
Tags:
ಶಿವಮೊಗ್ಗ ವರದಿ