ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆ ಈಡೇರಿಸಿ ಎಂಪಿಎಂ ಕಾರ್ಖಾನೆಗೆ ಬಂಡವಾಳ ತೊಡಗಿಸಿ: ಶಶಿಕುಮಾರ್ ಗೌಡ

ವಿಜಯ ಸಂಘರ್ಷ
ಭದ್ರಾವತಿ: ನಗರದ ಎಂಪಿಎಂ ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಿ ಪುನಶ್ವೇತನ ಗೊಳಿಸಿ ಸ್ಥಳೀಯ ನಿರುದ್ಯೋಗಿ ಯುವಕ ಯುವತಿಯರಿಗೆ ಕೆಲಸ ನೀಡುವಂತೆ ಆಗ್ರಹಿಸಿ ಸಂಯುಕ್ತ ಜನತಾದಳ ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಎಸ್.ಗೌಡ 
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಲ್ಲಿ ಒತ್ತಾಯಿಸಿದರು.

ಶನಿವಾರ ನಗರದಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ 
ಏಕಾಂಗಿಯಾಗಿ ಬಿತ್ತಿ ಪತ್ರ ಪ್ರದರ್ಶಿಸಿದರು.
ಎಂಪಿಎಂ ಕಾರ್ಖಾನೆ ಬಾಗಿಲು ಮುಚ್ಚಿ ಹಲವು ವರ್ಷಗಳೇ ಕಳೆದಿವೆ. ಸಾವಿರಾರು ಕಾರ್ಮಿಕ ಕುಟುಂಬಗಳು ಕೆಲಸವಿಲ್ಲದೆ ತೊಂದರೆ ಅನುಭವಿಸುತ್ತಿವೆ. ವಿಧಾನಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾರ್ಖಾನೆಗೆ ಬಂಡವಾಳ ಹೂಡಿಕೆ ಮಾಡಿ, ಪುನಶ್ವೇತನ ಗೊಳಿಸುತ್ತೇವೆಂದು ಭರವಸೆ ನೀಡಿರುತ್ತೀರಿ. ಅದೇ ರೀತಿ ರಾಜ್ಯದ ಮತ್ತು ಭದ್ರಾವತಿಯ ಜನತೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುತ್ತದೆ.ತಮ್ಮ ಸರ್ಕಾರದ ಅವಧಿಯಲ್ಲಿ ಕಾರ್ಖಾನೆಗೆ ಬಂಡವಾಳ ತೊಡಗಿಸಿ ಸ್ಥಳೀಯ ನಿರುದ್ಯೋಗ ಯುವಕ ಯುವತಿಯರಿಗೆ ಕೆಲಸವನ್ನು ನೀಡಬೇಕೆಂದು ಅಗ್ರಹಿಸಿದರು.

ಎಂಪಿಎಂ ಗೆ ಸಂಬಂಧಪಟ್ಟ ಕ್ವಾಟ್ರಸ್ ಗಳು ಖಾಲಿಯಾಗಿ ಶಿಥಿಲಾವ್ಯವಸ್ಥೆ ಇರುವುದರಿಂದ ತಾವುಗಳು ಕಾರ್ಖಾನೆ ಪುನಶ್ವೇತನ ಗೊಳಿಸುವ ತನಕ ವಸತಿಗೃಹ ಹಾಳಾಗದಂತೆ ಸ್ಥಳೀಯರಿಗೆ ಬಾಡಿಗೆ ರೂಪದಲ್ಲಿ ನೀಡುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳೇ ಎಂ ಪಿ ಎಂ ಅಧ್ಯಕ್ಷ ರಾಗಿರುವುದರಿಂದ ಜಿಲ್ಲಾಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿಯಲ್ಲಿ ಅಗ್ರಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು