ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 7ನೇ ತಾಲೂಕು ಸಮ್ಮೇಳನ ಸರ್ವಾಧ್ಯಕ್ಷ ರಾಗಿ ಡಾ.ಬಿ.ಜಿ.ಧನಂಜಯ

ವಿಜಯ ಸಂಘರ್ಷ
ಭದ್ರಾವತಿ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 7ನೇ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹೊನ್ನಾಳಿ ಸರಕಾರಿ ಪದವಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ.ಧನಂಜಯ ಆಯ್ಕೆ ಯಾಗಿದ್ದಾರೆ.

ಸಮ್ಮೇಳನವು ಮಾ: 10 ಮತ್ತು 11 ರಂದು ಎರಡು ದಿನಗಳ ಕಾಲ ಸಿದ್ದಾರೂಢ ನಗರದ ಬಸವೇಶ್ವರ ಸಭಾ ಭವನದಲ್ಲಿ ನಡೆಯಲಿದೆ. ಡಾ: ಧನಂಜಯ ರವರ ಅಪಾರ ಜ್ಞಾನ ಭಂಡಾರದ ಪ್ರತಿಭೆಯನ್ನು ಗುರುತಿಸಿದ ಪರಿಷತ್ ಜಿಲ್ಲಾಧ್ಯಕ್ಷ ಹೆಚ್.ಎನ್. ಮಹಾರುದ್ರ ಪ್ರಧಾನ ಕಾರ್ಯದರ್ಶಿ ಬಾರಂದೂರು ಪ್ರಕಾಶ್, ಗೌರವಾಧ್ಯಕ್ಷ ಎಂ.ವಿರೂಪಾಕ್ಷಪ್ಪ, ಸಮ್ಮೇಳನ ಕಾರ್ಯಾಧ್ಯಕ್ಷ ಜಗದೀಶ್ ಕವಿ, ತಾಲೂಕು ಅಧ್ಯಕ್ಷ ಎಸ್.ಎನ್. ಮಲ್ಲಿಕಾರ್ಜುನಯ್ಯ, ವಿರೂಪಾಕ್ಷಪ್ಪ,
ಹೆಚ್.ಮಲ್ಲಿಕಾರ್ಜುನ್, ಡಾ: ಹೆಚ್.ವಿ. ನಾಗರಾಜ್ ಮುಂತಾದವರು ಅವರ ಸಿದ್ದಾರೂಢ ನಗರದಲ್ಲಿನ ನಿವಾಸಕ್ಕೆ ತೆರಳಿ ಡಾ: ಬಿ.ಜಿ.ಧನಂಜಯ ಮತ್ತು ಪತ್ನಿ ಆ‌ರ್.ಡಿ.ಜಯಶೀಲಾ ದಂಪತಿ ಗಳನ್ನು ಗೌರವಿಸಿ ಅಧಿಕೃತವಾಗಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರಾದ ಬಿ.ಜಿ.ವಸಂತಕುಮಾರ್, ಬಿ.ಜಿ.ಬಸವರಾಜ್, ಮಲ್ಲಿಕಾಂಬ, ಪುತ್ರಿ ಡಿ.ಇಂಚರ ಮುಂತಾದವರಿದ್ದರು.

ಸಮ್ಮೇಳನಾಧ್ಯಕ್ಷರ ಕಿರು ಪರಿಚಯ:

ಡಾ: ಬಿ.ಜಿ.ಧನಂಜಯ ಅವರು ತಾಲೂಕಿನ ಬಾಬಳ್ಳಿ ಗ್ರಾಮದ ರೈತ ಕುಟುಂಬದ ಸ್ವಾತಂತ್ರ್ಯ ಹೋರಾಟ ಗಾರ ಶತಾಯುಷಿ ಯಾಗಿ ಇಹಲೋಕ ಸೇರಿದ ದಿ:ಗಂಗಪ್ಪ ಮತ್ತು ತಾಯಿ ಗಂಗಮ್ಮ ದಂಪತಿಗಳ 5 ನೇ ಪುತ್ರ 1967 ರಲ್ಲಿ ಜನಿಸಿದವರು. ಇವರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ, ನಗರದ ಟಿ.ಕೆ.ರಸ್ತೆಯ ಸರಕಾರಿ ಶಾಲೆಯಲ್ಲಿ ಪ್ರೌಢ ಮತ್ತು ಪಿಯು ಹಾಗೂ ನ್ಯೂಟೌನ್ ಸರ್‌ಎಂವಿ ಕಾಲೇಜಿನಲ್ಲಿ ಪದವಿ, ಕುವೆಂಪು ವಿವಿಯಲ್ಲಿ ಸಮಾಜಶಾಸ್ತ್ರ ಉನ್ನತ ಶಿಕ್ಷಣ, ಎಂಫಿಲ್ ನಲ್ಲಿ ಸಮಾಜಿಕ ವಿಜ್ಞಾನ ಪದವಿ ಪಡೆದಿದ್ದಾರೆ.

"ಕರ್ನಾಟಕದಲ್ಲಿ ರೈತ ಚಳುವಳಿ, ಸಂಘಟನೆ, ನಾಯಕತ್ವ, ಸಮಸ್ಯೆ ಮತ್ತು ಪರಿಹಾರ" ಎಂಬ ವಿಷಯದಲ್ಲಿ ಪಿಹೆಚ್‌ಡಿ ಪಡೆದವರು. 1995 ರಲ್ಲಿ ಕೆಪಿಎಸ್‌ಸಿ ಮೂಲಕ ಉಪನ್ಯಾಸಕ ರಾಗಿ ನೇಮಕಗೊಂಡು ನಂತರ ಭದ್ರಾವತಿ ಹೊಳೆಹೊನ್ನೂರು ಪ್ರಸ್ತುತ ಹೊನ್ನಾಳಿ ಯಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಲೇಖನಗಳಾದ ರೈತರು- ಸಮಾಜ-ಸರಕಾರ, ಸಮಸ್ಯೆ ಪರಿಹಾರ, ಭಾರತ ಸಂವಿಧಾನ ನಿರ್ಮಾತೃ ಬಾಬಾ ಸಾಹೇಬ್ ಅಂಬೇಡ್ಕರ್, ಭಯೋತ್ಪಾದನೆ ಒಂದು ಸಾಮಾಜಿಕ ಸಮಸ್ಯೆ, ಜಗಜ್ಯೋತಿ ಬಸವೇಶ್ವರರ ಕೊಡುಗೆ ಹೀಗೆ ಹತ್ತಾರು ಲೇಖನಗಳು ಪ್ರಕಟಗೊಂಡಿವೆ.

ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳ "ಶತಾಯುಷಿ" ಸೇರಿದಂತೆ ಅನೇಕ ಪ್ರಕಟಿತ ಪುಸ್ತಕಗಳಿಗೆ, ವಿಶೇಷ ಸಂಚಿಕೆಗಳಿಗೆ ಸಂಪಾದಕರಾಗಿ ಹಿನ್ನುಡಿ ಮುನ್ನುಡಿ ಬರೆದು ಹೆಸರಾವದವರು. ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರ ಗಳಲ್ಲಿ ಸಮಾಜ ಮುಖಿಯಾಗಿ ಭಾಗಿಯಾದವರು.ಕುವೆಂಪು ವಿವಿ ಸೆನೆಟ್ ಸದಸ್ಯರಾಗಿ ಪರೀಕ್ಷಾ ಸಲಹೆಗಾರರಾಗಿ, ಅನೇಕ ಸಂಘ ಸಂಸ್ಥೆಗಳಲ್ಲಿ ಸ್ಥಾನ ಮಾನಗಳಿಸಿ ದವರು. ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಸಹಕಾರ ಸಂಘಗಳಲ್ಲಿ ಮುನ್ನುಡಿ ಸಾಧಿಸಿದ್ದಾರೆ. ಇವರ ಧರ್ಮ ಪತ್ನಿ ಆರ್.ಡಿ.ಜಯಶೀಲ, ಪುತ್ರಿಯರಾದ ಕು:ಡಿ.ಮಧುಮಿಕ ಮತ್ತು ಕು: ಡಿ.ಇಂಚರ ಇವರಿಗೆ ಸಾಥ್ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು