ಕ್ರೈಸ್ತ ಸಮುದಾಯದ ಶಿಕ್ಷಣ- ಆರೋಗ್ಯ ಸೇವೆ ಅನನ್ಯ: ಭಾಸ್ಕರ್ ಬಾಬು

ವಿಜಯ ಸಂಘರ್ಷ
ಭದ್ರಾವತಿ: ನಗರದ ನಿರ್ಮಲ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಸ್ಟರ್ ಶೋಭನ, ಆಸ್ಪತ್ರೆಯ ಸೂಪೀರಿಯರ್ ಪ್ರಾಂತ್ಯ ಅಧಿಕಾರಿ ಸಿಸ್ಟರ್ ರೀಟಾ ವರ್ಗಿಸ್, ಇವರು ಸಮಾಜಕ್ಕೆ ಉತ್ತಮ ಸೇವೆಯನ್ನು ಗುರುತಿಸಿ ತೆಲುಗು ಕ್ರಿಶ್ಚಿಯನ್ ವೆಲ್ ಫೇರ್ ಅಸೋಸಿಯೇಷನ್ ಹಾಗೂ ಭದ್ರಾವತಿ ಕ್ರೈಸ್ತ ಒಕ್ಕೂಟ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಭದ್ರಾವತಿ ತೆಲುಗು ಕ್ರಿಶ್ಚಿಯನ್ ವೇಲ್ಫರ್ ಅಸೋಸಿಯೇಷನ್ ಅಧ್ಯಕ್ಷ ಭಾಸ್ಕರ್ ಬಾಬು ಮಾತನಾಡಿ, ಕ್ರೈಸ್ತ ಸಮುದಾಯ ಶಿಕ್ಷಣ ಮತ್ತು ಆರೋಗ್ಯ ಸೇವೆಯು ಅನನ್ಯವಾದದ್ದು. ಕ್ರೈಸ್ತರ ಸೇವೆಯನ್ನುಗುರುತಿಸುವಲ್ಲಿ ವಿಫಲರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಕ್ರೈಸ್ತರ ಸೇವೆಯನ್ನು ಗುರುತಿಸಿ, ಪ್ರೋತ್ಸಾಹ ನೀಡಲು ಮುಂದಾಗಬೇಕು ಎಂದು ಹೇಳಿದರು. 

ವಿವಿಧ ಕ್ರೈಸ್ತ ದೇವಾಲಯಗಳ ಧರ್ಮಗುರು ಗಳಾದ ಪಾಸ್ಟರ್ ಜಯರಾಮನ್, ಫಾ.ಡ್ಯಾನಿಯಲ್ ಜಾನ್ ಫಾ. ಉಮೇಶ್ ಟೈಟಸ್, ಫಾ.ಅಂತೋಣಿ ಪ್ರಕಾಶ್, ಸಮುದಾಯದ ಪ್ರಮುಖರಾದ ಕೆ. ಅಂತೋಣಿ, ಎನ್.ಸಾಮುವೇಲ್,
ಎನ್ ನೇತನ್,ಅಂತೋಣಿ, ಅಕ್ಷಯ್
ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು