ಕೆ ಆರ್ ಪೇಟೆಯಲ್ಲಿ ಅಪ್ಪು ಜನ್ಮದಿನಕ್ಕೆ ಅನ್ನಸಂತರ್ಪಣೆ

ವಿಜಯ ಸಂಘರ್ಷ
ಕೆ ಆರ್ ಪೇಟೆ: ಕನ್ನಡ ಚಲನಚಿತ್ರದ ದೃವ ತಾರೆ, ಪವರ್ ಸ್ಟಾರ್ ,ಕರ್ನಾಟಕ ರತ್ನ ,ಯುವರತ್ನ ಪುನೀತ್ ರಾಜ್‍ಕುಮಾರ್ (ಅಪ್ಪು) ಜನ್ಮದಿನದ ಅಂಗವಾಗಿ ತಾಲ್ಲೂಕು ಪುನೀತ್ ಸಾಮ್ರಾಜ್ಯ ಯುವ ಬಳಗದ ಅಧ್ಯಕ್ಷ ಮಹೇಶ್ ಕೆ ಎಲ್ ಅವರ ನೇತೃತ್ವದಲ್ಲಿ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಪಟ್ಟಣದ ಬೊಮ್ಮೇಗೌಡ ಸರ್ಕಲ್ ನಲ್ಲಿರುವ ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿಗೆ ವಿಶೇಷವಾಗಿ ಪೂಜೆ ಸಲ್ಲಿಸಿ ಪುಷ್ಪ ನಮನ ಮಾಡಲಾಯಿತು.

ಬಳಿಕ ಅಪ್ಪು ಯುವ ಸಮಾಜದ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಶ್ ಕೆ ಎಲ್ ಮಾತನಾಡಿ ಕನ್ನಡದ ಮೇರು ನಟ ಡಾ.ರಾಜಕುಮಾರ್ ಹೆಸರಾಂತ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್ ದಂಪತಿಗಳ ಸುಪುತ್ರರಾಗಿ ಜನಿಸಿದ ಅಪ್ಪು ಕೇವಲ ನಟನೆಗೆ ಸೀಮಿತವಾಗದೇ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ನಟನೆ ಹಾಗೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಸಿನಿಮಾಗಳಲ್ಲಿ ಉತ್ತಮ ಸಂದೇಶ ಸಾರುವ ಸಿನಿಮಾಗಳಲ್ಲಿ ನಟಿಸಿ ಅತ್ಯಂತ ಹೆಚ್ಚು ಪ್ರಸಿದ್ದರಾಗಿದ್ದರು.ಅನಾಥಶ್ರಮಗಳು,ವೃದ್ದಾಶ್ರಮಗಳು,ನಿರ್ಗತಿಕರಿಗೆ ಯಾವುದೇ ಪ್ರಚಾರ ವಿಲ್ಲದೇ ಆರ್ಥಿಕ ಸಹಾಯವನ್ನು ಮಾಡಿದ್ದು ಅವರ ದೊಡ್ಡ ಸಾಧನೆ ಎಂದು ಬಣ್ಣಿಸಿದರು.

ಯಾವುದೇ ಪ್ರಚಾರ ಇಲ್ಲದೆ ಸಾವಿರಾರು ಕುಟುಂಬಗಳ ನೋವಿಗೆ ಸ್ಪಂದಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಕಾರ್ಯವೈಖರಿ,ನಡೆವಳಿಕೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.ಅವರ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ವ್ಯಕ್ತಿಯಾಗಿ ಉತ್ತಮ ಸಮಾಜಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಅಪ್ಪು ಯುವ ಸಮಾಜದ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಗೋವಿಂದರಾಜ್, ಎಂ ಸಿ ಜಗದೀಶ್, ನಗರ ಘಟಕದ ಗೌರವಾಧ್ಯಕ್ಷ ಬೇಕರಿ ಹರೀಶ್,ನಗರ ಘಟಕದ ಅಧ್ಯಕ್ಷ ಹೊಸಹೊಳಲು ಹರೀಶ್,ತಾಲ್ಲೂಕು ಉಪಾಧ್ಯಕ್ಷ ರಾಘು,ನಿರ್ದೇಶಕರಾದ ಹರ್ಷ,ಚೇತನ, ಸತೀಶ್, ರಾಮು,ಚಂದ್ರು, ಜಯಕರ್ನಾಟಕ ಸಂಘಟನೆಯ ಸೋಮಶೇಖರ್, ಪ್ರವೀಣ್, ಹೊಸಹೊಳಲು ರವಿ,ವಾಟರ್ ದಿನೇಶ್, ಗಾರೆ ರಾಮು, ಅಶೋಕ್ ಸೇರಿದಂತೆ ನೂರಾರು ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು