ಪಕ್ಷ ಬೇಧ ಮರೆತು ಈಡಿಗ ಜನತೆ ಭಾಗವಹಿಸಲು ರತ್ನಾಕರ್ ಕರೆ:ಬಿ ಎಸ್ ವೈ ಗೆ ಸಮಾಜದಿಂದ ಸನ್ಮಾನ

ವಿಜಯ ಸಂಘರ್ಷ
ಸಾಗರ (ಆನಂದಪುರ): ಮಾ.5 ರಂದು ಸಾಗರದಲ್ಲಿ ನಡೆಯಲಿರುವ ಈಡಿಗ ಶಕ್ತಿ ಸಮಾವೇಶದ ಸಂದರ್ಭದಲ್ಲಿ ನಮ್ಮ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದ್ದು ಸಮಾಜ ಬಾಂಧವರೆಲ್ಲ ಆಗಮಿಸಿ ಸಮಾವೇಶವನ್ನು ಯಶಸ್ವಿಗೊಳಿಸಿ ಕೊಡಬೇಕು ಎಂದು ಜಿ.ಪಂ. ಮಾಜಿ ಸದಸ್ಯ ಹೊನಗೋಡು ರತ್ನಾಕರ್ ಮನವಿ ಮಾಡಿದರು.

ಈ ಸಮಾವೇಶದಲ್ಲಿ ಈಡಿಗ ಸಮಾಜದ 7 ಸ್ವಾಮೀಜಿಗಳವರು ಸಾನಿಧ್ಯವಹಿಸಲಿದ್ದಾರೆ. ಬಿ.ಎಸ್.ಯಡಿಯೂರಪ್ಪನವರು ಸಮಾಜದ ಎಲ್ಲಾ ವರ್ಗದವರ ಏಳಿಗೆಗಾಗಿ ತಮ್ಮ ಆಡಳಿತಾವಧಿಯಲ್ಲಿ ನಿರಂತರ ಶ್ರಮಿಸಿದವ ರಾಗಿದ್ದಾರೆ. ಅವರು ರಾಜಕೀಯ ನಿವೃತ್ತಿಯಾದ ಹಿನ್ನೆಲೆ ಹಾಗೂ ಅವರು ಈಡಿಗ ಸಮಾಜಕ್ಕೆ ನೀಡಿದ ಅನೇಕ ಕೊಡುಗೆಗಳಿಗೆ ಪ್ರತಿಯಾಗಿ ಅಭಿಮಾನ ತೋರುವುದು ನಮ್ಮ ಸಮಾಜ ಬಾಂಧವರ ಕರ್ತವ್ಯವಾಗಿದೆ.

ಬಿ ಎಸ್ ವೈ ರವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭಗಳಲ್ಲಿ ಈಡಿಗ ಸಮಾಜಕ್ಕಾಗಿ ಸೋಲೂರು ಮಠ, ಶಿವಮೊಗ್ಗ ನಗರದಲ್ಲಿ ಕಲ್ಯಾಣ ಮಂಟಪ, ಮಹಿಳಾ ಹಾಸ್ಟೆಲ್ ನಿರ್ಮಾಣಕ್ಕೆ ಜಾಗ ಹಾಗೂ ಕಟ್ಟಡಕ್ಕೆ ಸೇರಿದಂತೆ ರಾಜ್ಯಾದ್ಯಂತ ಈಡಿಗ ಸಮಾಜದ ಮಠಗಳಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಸಮಾಜದ ವತಿಯಿಂದ ಬಿ ಎಸ್ ವೈ ರವರಿಗೆ ವಿಶೇಷ ಸನ್ಮಾನ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಆನಂದಪುರ ಗ್ರಾ.ಪಂ. ಅಧ್ಯಕ್ಷ ಮೋಹನ್ ಕುಮಾರ್, ಪ್ರಮುಖರಾದ ಧನ್‌ರಾಜ್, ಪಂಚಾಯತಿ ಸದಸ್ಯ ಗುರುರಾಜ್, ಪರಮೇಶ್ವರ ಕಣ್ಣೂರು, ನೇತ್ರಾವತಿಮಂಜುನಾಥ್, ರೇಣುಕಾದಿನೇಶ್, ಮಂಜುನಾಥ್ ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು