ವಿಜಯ ಸಂಘರ್ಷ
ಭದ್ರಾವತಿ: ನಗರದ ವಿಐಎಸ್ ಎಲ್ ಕಾರ್ಖಾನೆ ಉಳಿವಿಗಾಗಿ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಪದಾಧಿಕಾರಿಗಳು ಇಂದು ಆದಿ ಚುಂಚನಗಿರಿ ಮಠದಲ್ಲಿ
ಶ್ರೀ ನಿರ್ಮಲಾನಂದನಾಥ ಶ್ರೀ ಗಳನ್ನು ಭೇಟಿ ಮಾಡಿ ಕಾರ್ಖಾನೆಯ ಇತ್ತೀಚಿನ ಬೆಳವಣಿಗೆಗಳನ್ನು ಶ್ರೀಗಳ ಗಮನಕ್ಕೆ ತರಲಾಯಿತು.
ಅಲ್ಲದೆ ಕಾರ್ಖಾನೆಯನ್ನು ಉಳಿಸಿ ಕೊಳ್ಳಲು ಪ್ರಧಾನ ಮಂತ್ರಿಗಳ ಬಳಿ ಮಾತನಾಡಿ ಕಾರ್ಖಾನೆಯನ್ನು ಉಳಿಸಿ ಕೊಡುವoತೆ ವಿನಂತಿಸಲಾಯಿತು.
ಶ್ರೀಗಳು ಸ್ಪಂದಿಸಿ ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಕಾರ್ಖಾನೆಗೆ ಮುಂದೆ ಒಳ್ಳೆಯ ದಿನಗಳು ಬರಲಿದೆ.
ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಅಭಯ ನೀಡಿದ್ದಾರೆ ಎಂದು ಪದಾಧಿಕಾರಿಗಳು ಆಶಯ ವ್ಯಕ್ತಪಡಿಸಿದ್ದಾರೆ.
ಶ್ರೀಗಳ ಭೇಟಿ ಸಂದರ್ಭದಲ್ಲಿ ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್, ಪ್ರಧಾನ ಕಾರ್ಯದರ್ಶಿ ರಾಕೇಶ್, ಸಹ ಕಾರ್ಯದರ್ಶಿ ಗುಣಶೇಕರ ,ಕಾರ್ಯಕಾರಿ ಸಮಿತಿ ಸದಸ್ಯರಾದ ಎಸ್ ಕೆ ಮಂಜುನಾಥ್ಉಮೇಶ್ ಭಾಗವಹಿಸಿದ್ದರು.