ವಿಜಯ ಸಂಘರ್ಷ
ಸಾಗರ: ವಿದ್ಯಾರ್ಥಿಗಳನ್ನು ಕಲಿಕೆಯತ್ತ ಆಸಕ್ತಿ ತಾಳುವಂತೆ ಮಾಡುವ ಉದ್ದೇಶದಿಂದ ಸ್ವತಃ ತಾವೇ ತಪ್ಪು ಮಾಡಿದವರಿಂದ ಏಟು ತಿನ್ನುವ ಶಿಕ್ಷಕರೊಬ್ಬರು ತಮ್ಮ ವಿಭಿನ್ನ ಮಾರ್ಗದಿಂದ ಯಶಸ್ಸನ್ನೂ ಕಂಡಿದ್ದಾರೆ.
ಹಾಲಂದೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್.ಎಸ್.ಗೋಪಾಲ್ ಅವರೇ ಪಾಠ ಹೇಳಿದ ಬಳಿಕ ವಿದ್ಯಾರ್ಥಿ ಗಳಿಂದ ಉತ್ತರ ಪಡೆಯುತ್ತಾರೆ. ತಪ್ಪು ಉತ್ತರ ನೀಡಿದ ಶಿಷ್ಯರಿಂದಲೇ ಛಡಿಯಿಂದ ಏಟು ತಿನ್ನುವುದನ್ನು ರೂಢಿ ಮಾಡಿದ್ದಾರೆ.
ಶಿಕ್ಷಕರಿಗೇ ಹೊಡೆಯಬೇಕಲ್ಲ ಎಂಬ ಕಾರಣದಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ತಾಳುತ್ತಿದ್ದಾರೆ. ಈ ಮಾದರಿ ಯಶಸ್ವಿಯಾಗಿದೆ ಎಂದು ಈಗ ಕಲಿಯುತ್ತಿರುವ ವಿದ್ಯಾರ್ಥಿಗಳ ಪಾಲಕರು ಮತ್ತು ಈ ಹಿಂದೆ ಇಲ್ಲಿ ಕಲಿತು ಹೋಗಿರುವ ಹಳೆ ವಿದ್ಯಾರ್ಥಿಗಳು ಹೇಳುತ್ತಾರೆ.