ಮಾಜಿ ಸಿಎಂಗಳ ಮಕ್ಕಳ ನಡುವೆ ಲೋಕಸಮರಕ್ಕೆ ಸಜ್ಜಾಗುತ್ತಿದೆ ಶಿವಮೊಗ್ಗ..?

ವಿಜಯ ಸಂಘರ್ಷ
ಶಿವಮೊಗ್ಗ: ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಮರಕ್ಕೆ ಅಖಾಡ ಸಿದ್ಧವಾಗ್ತಿದೆ. ನನಗೆ ಟಿಕೆಟ್ ಸಿಗುತ್ತೆ ಅಂತ ಕೆಲ ಆಕಾಂಕ್ಷಿಗಳು ಈಗಿನಿಂದಲೇ ಹೇಗೆಲ್ಲಾ ಮತಯಾಚನೆ ಮಾಡ್ಬೇಕು ಅನ್ನೋ ತಯಾರಿಯಲ್ಲಿದ್ದು,
ಕೈ ಪಾಳೆಯದಲ್ಲಿ ಸಂಚಲನ ಮೂಡಿಸಿದೆ.
ಬಿಜೆಪಿಯಲ್ಲಿದ್ದು ಸದ್ಯ ತಟಸ್ಥರಾಗಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರನ್ನು ಕಾಂಗ್ರೆಸ್ ಗೆ ಕರೆತಂದು ಲೋಕಸಭಾ ಚುನಾವಣಾ ಕೈ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ನಾಯಕರ ಪ್ರಯತ್ನ ವಿಫಲವಾಗಿದ್ದು, ಕುಮಾರ್ ಬಂಗಾರಪ್ಪ ಅವರ ಕಾಂಗ್ರೆಸ್ ಸೇರ್ಪಡೆಯನ್ನು ತೀವ್ರವಾಗಿ ವಿರೋಧಿಸಿದ್ದ ಸಹೋದರ ಸಚಿವ ಮಧುಬಂಗಾರಪ್ಪ ತಮ್ಮ ಸಹೋದರಿ ಗೀತಾ ಶಿವರಾಜ್ ಕುಮಾರ್ ರವರಿಗೆ ಪಕ್ಷದ ಟಿಕೆಟ್ ಕೊಡಿಸುವಲ್ಲಿ ಮೇಲುಗೈ ಸಾಧಿಸಿದ್ದಾರೆ.

ಸದ್ಯಕ್ಕೆ ಕಾಂಗ್ರೆಸ್‌ ಇದೀಗ ಫಸ್ಟ್‌ ಲಿಸ್ಟ್‌ ರಿಲೀಸ್ ಮಾಡಿದೆ. ಶಿವಮೊಗ್ಗದ ಕಾಂಗ್ರೆಸ್‌ ಟಿಕೆಟ್‌ ಪಡೆಯುವಲ್ಲಿ ಗೀತಾ ಶಿವರಾಜ್‌ ಕುಮಾರ್‌ ಯಶಸ್ವಿಯಾಗಿದ್ದಾರೆ. 2014ರಲ್ಲಿ ಶಿವಮೊಗ್ಗದಲ್ಲೇ ನಿಂತಿದ್ದ ಗೀತಾ ಶಿವರಾಜ್‌ ಕುಮಾರ್‌ ಸೋಲನುಭವಿಸಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು. ತಮ್ಮ ಸಹೋದರ ಮಧುಬಂಗಾರಪ್ಪ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವುದರಿಂದ ಬಿಜೆಪಿಗೆ ಈ ಬಾರಿ ಸೋಲುಣಿಸುವ ಮೂಲಕ ಗೀತಾ ರಾಜಕೀಯ ಸೇಡು ತೀರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು