ವಿಜಯ ಸಂಘರ್ಷ
ಭದ್ರಾವತಿ: ನನ್ನ ಗೆಲುವಿಗೆ ಮತದಾರ ಪ್ರಭುಗಳ ಶ್ರೀರಕ್ಷೆ ಕಾರಣ. ನನ್ನನ್ನು ಗೆಲ್ಲಿಸಿದ ಕ್ಷೇತ್ರದ ಜನರ ಆಶೀರ್ವಾದ ದಿಂದ ಉನ್ನತ ಸ್ಥಾನ ಲಭಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆ ಸಲ್ಲಿಸುವೆ ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷಬಿ.ಕೆ.ಸಂಗಮೇಶ್ವರ್ ತಿಳಿಸಿದರು.
ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಾರ್ವಜನಿಕರ ಸಲಹೆ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ಜರಗುತ್ತಿವೆ. ಮುಂದಿನ ದಿನಗಳಲ್ಲಿ ನಿಗಮ ಮಂಡಳಿ ಯಿಂದ ಸಾಮಾಜಿಕವಾಗಿ, ಪ್ರಾಮಾಣಿಕವಾಗಿ, ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತೇನೆ. ಯಾವುದೇ ಕ್ಷೇತ್ರಗಳು ಅಭಿವೃದ್ಧಿಯಾಗಲು ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಸೂಡಾ ಮಾಜಿ ಅಧ್ಯಕ್ಷ ಎಸ್ ಎಸ್ ಜ್ಯೋತಿ ಪ್ರಕಾಶ್ ಮಾತನಾಡಿ,ಬಿ ಕೆ ಸಂಗಮೇಶ್ವರ ಅವರು ನಮ್ಮ ಜಿಲ್ಲೆಯ ಒಂದು ಶಕ್ತಿ, ಅವರಿಗೆ ಇನ್ನೂ ಉನ್ನತ ಸ್ಥಾನ ಮಂತ್ರಿ ಸ್ಥಾನ ಸಿಗಬೇಕಾಗಿತ್ತು. ಬರುವ ದಿನಗಳಲ್ಲಿ ಬೇಗನೆ ಮಂತ್ರಿಯಾಗಿ ಇನ್ನು ಹೆಚ್ಚಿನ ಸೇವೆ ಸಲ್ಲಿಸಲು ನಮ್ಮ ಸಮಾಜ ದವರು ಅವರ ಅಭಿವೃದ್ಧಿ ಯಲ್ಲಿ ಸದಾ ನಾವು ಕೈಜೋಡಿಸುತ್ತೇವೆ ಎಂದು ನುಡಿದರು.
ಗಾಣಿಗ ಕ್ಷೇಮಾಭಿವೃದ್ಧಿ ಜಿಲ್ಲಾ ಸಂಘದ ಅಧ್ಯಕ್ಷ ಜಿ. ವಿಜಯಕುಮಾರ್ ಮಾತನಾಡಿ, ಸಂಗಮೇಶ್ವರ ಅವರು ಕ್ಷೇತ್ರ ಅಭಿವೃದ್ಧಿ, ಜನರ ಪ್ರೀತಿ ವಿಶ್ವಾಸ ಹಾಗೂ ಸಾಧನೆಯಿಂದ ಉನ್ನತ ಸ್ಥಾನ ಲಭಿಸಿದೆ ಎಂದರು.
ಸಮಾಜದ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು.ಶಾಸಕರ ಸಹೋದರ ಬಿ.ಕೆ.ಜಗನ್ನಾಥ್, ಶಾಸಕರ ಪುತ್ರ ಬಿ.ಎಸ್.ಗಣೇಶ್, ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಕಿರಣ್ ಕುಮಾರ್, ಪದಾಧಿಕಾರಿಗಳಾದ ರವಿಕುಮಾರ್, ಮಲ್ಲಿಕಾರ್ಜುನ ಕಾನೂರ್, ಎಂ ವಿ ಸಜ್ಜನ್ ಶೆಟ್ಟರ್,ಪ್ರೊ.ನೀಲಗುಂದ್, ಚಂದ್ರಶೇಖರ, ರುದ್ರಪ್ಪ, ಭದ್ರಾವತಿ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆನಂದ ಕುಮಾರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.