ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕ್ಯಾತ್ ಲ್ಯಾಬ್ ಶುಭಾರಂಭ

ವಿಜಯ ಸಂಘರ್ಷ 
ಶಿವಮೊಗ್ಗ: ಸರ್ಜಿ ಆಸ್ಪತ್ರೆಗಳ ಸಮೂಹಕ್ಕೆ ಮತ್ತೊಂದು ಆರೋಗ್ಯ ಸೇವಾ ಸೌಲಭ್ಯ ಇದೀಗ ಸೇರ್ಪಡೆಗೊಂಡಿದ್ದು, ಸೋಮವಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸುಸಜ್ಜಿತ ಕ್ಯಾತ್ ಲ್ಯಾಬ್ ಚಿಕಿತ್ಸಾ ಸೌಲಭ್ಯಕ್ಕೆ ಪೂಜೆ ಸಲ್ಲಿಸುವ ಮೂಲಕ ಶುಭಾರಂಭ ಗೊಳಿಸಲಾಯಿತು. 

ಈ ಸಂದರ್ಭದಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ ಸರ್ಜಿ, ನಿರ್ದೇಶಕಿ ನಮಿತಾ ಸರ್ಜಿ, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಾದಿರಾಜ್ ಕುಲಕರ್ಣಿ, ಹೃದಯರೋಗ ತಜ್ಞ ಡಾ. ವಿಜೇತ್, ಡಾ.ಹರೀಶ್, ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪ್ರಶಾಂತ್ ಎಸ್.ವಿ. ಆಸ್ಪತ್ರೆಯ ಆಡಳಿತಾಧಿಕಾರಿ ಕೆ.ಆರ್. ಪುರುಷೋತ್ತಮ್, ಹರ್ಷ ಸರ್ಜಿ, ನಾಗವೇಣಿ ಸರ್ಜಿ, ಈಶ್ವರ್ ಸರ್ಜಿ, ಡಾ.ಶ್ರೇಯಾ ಸರ್ಜಿ ಮತ್ತಿತರರು ಪಾಲ್ಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು